ಮಡಿಕೇರಿ, ಮಾ.೫: ಜ್ಞಾನದಿಂದ ವಿಜ್ಞಾನವೇ ಹೊರತು ವಿಜ್ಞಾನದಿಂದ ಜ್ಞಾನವಲ್ಲ, ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ತನ್ನ ಜ್ಞಾನವನ್ನು ಓದಿನ ಮೂಲಕ ಹೆಚ್ಚಿಸಿಕೊಳ್ಳಬೇಕಿದೆ ಹಾಗೂ ಹೆತ್ತವರಿಗೆ ಆಸರೆಯಾಗಬೇಕು ಜೊತೆಗೆ ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಪಣತೊಡಬೇಕು ಎಂದು ಪತ್ರಕರ್ತ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅಭಿಪ್ರಾಯಪಟ್ಟರು.
ರಾಷ್ಟಿçÃಯ ವಿಜ್ಞಾನ ದಿನಾಚರಣೆ ಅಂಗವಾಗಿ ಪೊನ್ನಂಪೇಟೆಯ ನಿನಾದ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಲಾದ ತಾಲೂಕು ಮಟ್ಟದ ವಿಜ್ಞಾನ ಮೇಳ-೨೦೨೩ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರವೀಣ್ ಉತ್ತಪ್ಪ, ವಿದ್ಯಾರ್ಥಿಗಳು ಕೇವಲ ಬಹುಮಾನಕ್ಕಾಗಿ ಅಥವಾ ಮೆಚ್ಚುಗೆಗಾಗಿ ಹೊಸ ಆವಿಷ್ಕಾರಗಳನ್ನು ಮಾಡದೆ ಮುಂದಿನ ದಿನಗಳಲ್ಲಿ ಕೂಡ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ಈ ದೇಶಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಬೇಕಿದೆ ಎಂದರು. ಮುಂದಿನ ದಿನಗಳಲ್ಲಿ ತಾವುಗಳು ಓದಿ ದೊಡ್ಡವರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದಾಗ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆದು, ಭ್ರಷ್ಟಾಚಾರ ಮುಕ್ತ ಭಾರತದ ಸೃಷ್ಟಿ ಸಾಧ್ಯವಾಗಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದರು.
ಈ ಸಂದರ್ಭದಲ್ಲಿ ನಿನಾದ ಶಾಲೆಯ ಮುಖ್ಯಸ್ಥರಾದ ನಾಗೇಶ್, ಮುಖ್ಯೋಪಾಧ್ಯಾಯಿನಿ ಶಿಲ್ಪ, ಶಿಕ್ಷಕಿ ಭವಾನಿ ಹಾಗೂ ಪೊನ್ನಂಪೇಟೆ ಸರ್ಕಾರಿ ಶಾಲೆಯ ಶಿಕ್ಷಕರಾದ ಮಹೇಶ್ ಉಪಸ್ಥಿತರಿದ್ಧರು. ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ವಿಜ್ಞಾನದ ವಿವಿಧ ಮಾದರಿಗಳ ಪ್ರದರ್ಶನ ಹಾಗೂ ಪೈಪೋಟಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪೊನ್ನಂಪೇಟೆ ತಾಲ್ಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ನಿನಾದ ಶಾಲೆ, ಅಪ್ಪಚ್ಚಕವಿ ವಿದ್ಯಾಲಯ, ಸರ್ವದೈವತಾ ಆಂಗ್ಲ ಮಾಧ್ಯಮ ಶಾಲೆ, ಸಂತ ಅಂಥೋನಿ ಶಾಲೆ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯ ಮಾದರಿ ವಿಜ್ಞಾನ ಪ್ರದರ್ಶನ ವಿಭಾಗದಲ್ಲಿ ಹಳ್ಳಿಗಟ್ಟು ನಿನಾದ ಶಾಲೆಯ ವಿದ್ಯಾರ್ಥಿಗಳಾದ ಥಾಶ್ಫ್ಯಾ, ರಿಫಾ ಹಾಗೂ ಮೌಲ್ಯ ತಂಡದ ಜಲ ವಿದ್ಯುತ್ ಅಣೆಕಟ್ಟು (ಹೈಡ್ರೋ ಎಲೆಕ್ಟ್ರಿಕ್ ಪವರ್ ಡ್ಯಾಮ್) ಮೊದಲ ಬಹುಮಾನ ಪಡೆದುಕೊಂಡರೆ, ಅರ್ವತೋಕ್ಲುವಿನ ಸರ್ವ ದೈವತಾ ಶಾಲೆಯ ವಿದ್ಯಾರ್ಥಿಗಳಾದ ಅಮೃತ್ ಹಾಗೂ ಆಕಾಶ್ ತಂಡ ನಿರ್ಮಿಸಿದ ಲೇಸರ್ ಆದಾರಿತ ಮನೆ (ಲೇಸರ್ ಬೇಸ್ಡ್ ಹೋಂ) ಮಾದರಿ ದ್ವಿತೀಯ ಸ್ಥಾನ ಪಡೆದುಕೊಂಡಿತು, ಪೊನ್ನಂಪೇಟೆಯ ಸಂತ ಅಂತೋನಿ ಶಾಲೆಯ ವಿದ್ಯಾರ್ಥಿಗಳಾದ ಪಲ್ಲವಿ ಹಾಗೂ ಜಾಗೃತಿ ತಂಡದ ಮಳೆ ನೀರಿನಿಂದ ವಿದ್ಯುತ್ (ಎಲೆಕ್ಟಿçಸಿಟಿ ಬೈ ರೈನ್ ವಾಟರ್) ಮಾದರಿ ತೃತೀಯ ಬಹುಮಾನ ಪಡೆದುಕೊಂಡಿತು.
ಕೆಲಸ ಮಾಡದ ಮಾದರಿ ವಿಜ್ಞಾನ ಪ್ರದರ್ಶನ ವಿಭಾಗದಲ್ಲಿ ಅರ್ವತೋಕ್ಲು ಸರ್ವದೈವತಾ ಶಾಲೆಯ ವಿಸ್ಮಯ ಹಾಗೂ ರಾಶಿ ತಂಡದ ಮಾದರಿ ಗ್ರಾಮ (ಮಾಡಲ್ ವಿಲೇಜ್) ಮೊದಲ ಬಹುಮಾನ, ಪೊನ್ನಂಪೇಟೆ ಅಪ್ಪಚ್ಚಕವಿ ಶಾಲೆಯ ಅಜಿತ್ ಹಾಗೂ ಭವ್ಯ ತಂಡದ ಸೌರ ಮಂಡಲ (ಸೋಲಾರ್ ಸಿಸ್ಟಮ್) ದ್ವಿತೀಯ ಹಾಗೂ ಹಳ್ಳಿಗಟ್ಟು ನಿನಾದ ಶಾಲೆಯ ಪೊನ್ನಮ್ಮ ಹಾಗೂ ನಿಹಾಲ್ ತಂಡದ ಅರಣ್ಯೀಕರಣ ಮತ್ತು ಅರಣ್ಯ ನಾಶ (ಅಫೋರೇಸಿಯನ್ ಹಾಗೂ ಡೆಫೋರೇಸಿಯನ್) ಮಾದರಿ ತೃತೀಯ ಬಹುಮಾನ ಪಡೆದುಕೊಂಡಿತು.