ನಾಪೋಕ್ಲು, ಮಾ. ೫: ಸಮೀಪದ ಮೂರ್ನಾಡಿನ ನಕ್ಷತ್ರ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಮೂರ್ನಾಡು ಪಾಂಡಾಣೆ ಕ್ರೀಡಾ ಮೈದಾನದಲ್ಲಿ ಎಂಟನೇ ವರ್ಷದ ವಾರ್ಷಿಕ ಆಟೋಟ ಸ್ಪರ್ಧಾ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಮೂರ್ನಾಡಿನ ಪೀರ್ ಅಹಮದ್, ಕಟ್ಟೆಮಾಡಿನ ಐತಪ್ಪ, ಪಾಲೆಮಾಡಿನ ಮೇವಿನ್ ಮತ್ತು ೧೦ನೇ ತರಗತಿಯ ಅಧಿಕ ಅಂಕಗಳಿಸಿದ ಎಂ.ಆರ್. ಭುವನೇಶ್ ಹಾಗೂ ಹೆಚ್.ಎಸ್. ಮೋನಿಕಾ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವೈಷ್ಣವಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿವಿಧ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.