ಚೆಟ್ಟಳ್ಳಿ, ಮಾ. ೫: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ವಾಗತ ಕಮಾನನ್ನು ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಉದ್ಘಾಟಿದರು.
ರಾಜ್ಯದಲ್ಲೇ ಹೆಸರುಗಳಿಸಿರುವ ಚೆಟ್ಟಳ್ಳಿ ಸಹಕಾರ ಸಂಘದ ಮಖ್ಯ ಕಚೇರಿಯ ಪುಣ್ಯಕೋಟಿ ವಾಣಿಜ್ಯ ಸಂಕೀರ್ಣ, ವಿಶ್ವಗುರು ಪ್ರಧಾನಿ ನರೇಂದ್ರಮೋದಿ ಸಹಕಾರ ಭವನದಲ್ಲಿ ಹಾಗೂ ಈರಳೆ ಶಾಖೆಯ ಪಂಚಮುಖಿ ವಾಯು ಪುತ್ರ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಅಳವಡಿಸಿರುವ ಸ್ವಾಗತ ಕಮಾನಿಗೆ ಧ್ವಜವನ್ನು ಅಳವಡಿಸುವ ಮೂಲಕ ಉದ್ಘಾಟಿಸಲಾಯಿತು.
ಬಲ್ಲಾರಂಡ ಮಣಿ ಉತ್ತಪ್ಪ ಮತನಾಡಿ, ಚೆಟ್ಟಳ್ಳಿ ಸಹಕಾರ ಸಂಘ ಮಾದರಿ ಸಹಕಾರ ಸಂಘವಾಗಿ ಅಭಿವೃದ್ಧಿ ಸಾಧಿಸಿದೆ ಎಂದರು. ಈ ಸಂದರ್ಭ ಉಪಾಧ್ಯಕ್ಷ ಕಣಜಾಲು ಪೂವಯ್ಯ, ಸಂಘದ ನಿರ್ದೇಶಕರಾದ ಪುತ್ತರಿರ ಸೀತಮ್ಮ ಮೊಣ್ಣಪ್ಪ, ನೂಜಿಬೈಲು ಡಿ. ನಾಣಯ್ಯ, ಮರದಾಳು ಉಲ್ಲಾಸ, ಅಡಿಕೇರ ಮುತ್ತಪ್ಪ, ಕೊಂಗೇಟಿರ ವಾಣಿ ಕಾಳಪ್ಪ, ಬಟ್ಟೀರ ಅಪ್ಪಣ್ಣ, ಪೇರಿಯನ ಪೂಣಚ್ಚ, ಧನಂಜಯ ಟಿ.ಎಸ್, ಕಾಶಿ ಬಿ.ಎಂ, ಸಂಘದ ಆಂತರಿಕ ಲೆಕ್ಕಪರಿಶೋಧಕ ಹೆಚ್.ಬಿ. ರಮೇಶ್, ಮುಖ್ಯಕಾರ್ಯ ನಿರ್ವಹಣಾಧಿಕಾರಿ ನಂದಿನಿ ಕೆ.ಎಸ್., ಸಿಬ್ಬಂದಿಗಳು ಹಾಗೂ ಸ್ಥಳೀಯರು ಹಾಜರಿದ್ದರು.