ಸ್ಫೋಟದ ಹೊಣೆ ಹೊತ್ತ ಐಎಸ್ಐಎಸ್ ಸಂಘಟನೆ!
ಮAಗಳೂರು, ಮಾ. ೫: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಾಗೂ ತಮಿಳುನಾಡಿನ ಕೊಯಮತ್ತೂರು ಸ್ಫೋಟದ ಹೊಣೆಯನ್ನು ಕೊನೆಗೂ ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತಿದೆ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿ ಮಾಡುವ ಉದ್ದೇಶದಿಂದ ಶಂಕಿತ ಉಗ್ರ ಶಾರೀಕ್ ಕುಕ್ಕರ್ನಲ್ಲಿ ಬಾಂಬ್ ಇಟ್ಟುಕೊಂಡು ಹೋಗುತ್ತಿದ್ದಾಗ ಕಂಕನಾಡಿ ಬಳಿ ಅಚಾನಕ್ ಆಗಿ ಸ್ಫೋಟವಾಗಿ ದೊಡ್ಡ ಅನಾಹುತ ತಪ್ಪಿತ್ತು. ಇನ್ನು ತಮಿಳುನಾಡಿನ ಕೊಯಮತ್ತೂರು ಬಳಿ ಸಹ ಸ್ಫೋಟ ನಡೆಸಿತ್ತು. ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸಹ ಸಂಘಟನೆಯಾದ ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ಐಎಸ್ಕೆಪಿ) ಈ ದಾಳಿಗಳ ಹೊಣೆ ಹೊತ್ತಿದೆ. ಮಂಗಳೂರಿನ ಕದ್ರಿಯಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಲು ನಮ್ಮ ಸಹೋದರ ಪ್ರಯತ್ನಿಸಿದ್ದನು. ಆದರೆ ಅದು ವಿಫಲವಾಗಿದೆ. ಆದರೆ ನಮ್ಮ ಕಾರ್ಯಾಚರಣೆಗಳನ್ನು ನಿಲ್ಲಿಸುವುದಿಲ್ಲ. ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ಣು ತಪ್ಪಿಸಿ ದಾಳಿ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ. ೨೦೨೨ರ ನವೆಂಬರ್ ೯ ರಂದು ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿದ್ದು ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು, ಮಾ. ೫: ಚಾಮುಂಡಿ ಬೆಟ್ಟದ ನಂದಿ ವಿಗ್ರಹದ ಪಕ್ಕದಲ್ಲಿರುವ ಕುರುಚಲು ಪ್ರದೇಶದಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿತ್ತು. ಬೆಟ್ಟಗಳ ಮೇಲಿನ ಒಣ ಹುಲ್ಲಿಗೆ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಚಾಮುಂಡಿ ಬೆಟ್ಟದ ನಿವಾಸಿಗಳು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಸಿಬ್ಬಂದಿಯೊAದಿಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ಸುಮಾರು ೧೦ ಎಕರೆ ಬೆಟ್ಟದವರೆಗೆ ಹರಡಿದ್ದ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ಆರಂಭಿಸಿದರು. ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಲ್ಲಿಯೂ ನಿನ್ನೆ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು. ಮಧ್ಯಾಹ್ನ ೧೨.೩೦ರ ಸುಮಾರಿಗೆ ಗೌರಿಕಲ್ಲು ಗುಡ್ಡ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಬೆಂಕಿ ನಂದಿಸಲು ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟರು. ಮಧ್ಯಾಹ್ನ ೨.೩೦ರ ಸುಮಾರಿಗೆ ಬೆಂಕಿ ನಂದಿಸಲಾಯಿತು ಎಂದು ತಿಳಿಸಿದ್ದಾರೆ. ಅಂದಾಜಿನ ಪ್ರಕಾರ ಸುಮಾರು ೮ ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ:ಪ್ರಕರಣ ದಾಖಲು
ಭೋಪಾಲ್, ಮಾ. ೫: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪಾದ್ರಿ, ಶಿಕ್ಷಕರು, ನನ್ ವಿರುದ್ಧ ಮಧ್ಯಪ್ರದೇಶದ ದಿಂಡೋರಿಯ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯರಿಗೆ ಥಳಿಸುವುದು ಹಾಗೂ ಲೈಂಗಿಕ ಕಿರುಕುಳ ನೀಡಿರುವ ಆರೋಪ ಪಾದ್ರಿ, ಶಿಕ್ಷಕರು, ನನ್ ವಿರುದ್ಧ ಕೇಳಿಬಂದಿದೆ. ೪೦ ವರ್ಷದ ಪ್ರಾಂಶುಪಾಲರು ಹಾಗೂ ೩೫ ವರ್ಷದ ಅತಿಥಿ ಶಿಕ್ಷಕರ ವಿರುದ್ಧ ಸೆಕ್ಷನ್ ೩೫೪ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೋಕ್ಸೋ ಕಾಯ್ದೆ ಹಾಗೂ ಬಾಲಾಪರಾಧಿ ನ್ಯಾಯ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಡಿಂಡೋರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಿಂಗ್ ತಿಳಿಸಿದ್ದಾರೆ. ಶಾಲೆಯ ಉಸ್ತುವಾರಿಯಾಗಿರುವ ೪೦ ವರ್ಷದ ಪಾದ್ರಿಯ ವಿರುದ್ಧವೂ ವಿದ್ಯಾರ್ಥಿನಿಯರು ದೂರು ನೀಡಿದ್ದು, ನನ್ ವಿರುದ್ಧ ವಿದ್ಯಾರ್ಥಿನಿಯರನ್ನು ಥಳಿಸುತ್ತಿದ್ದ ಆರೋಪ ಕೇಳಿಬಂದಿದೆ. ಈವರೆಗಿನ ಮಾಹಿತಿಯ ಪ್ರಕಾರ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಜಬಲ್ಪುರ್ನಲ್ಲಿರುವ ರೋಮನ್ ಕ್ಯಾಥೋಲಿಕ್ ಸಮುದಾಯದ ಡಯೋಸಿಸನ್ ಎಜುಕೇಶನ್ ಸೊಸೈಟಿ ಈ ಶಾಲೆಯನ್ನು ನಡೆಸುತ್ತಿತ್ತು. ಮಧ್ಯಪ್ರದೇಶದ ಮಕ್ಕಳ ರಕ್ಷಣಾ ಇಲಾಖೆ ಸದಸ್ಯರು ಹಾಗೂ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ ಪಿ ಹೇಳಿದ್ದಾರೆ.
೨೧ ನಿಮಿಷಗಳ ಅಂತರದಲ್ಲಿ ೩ ಭೂಕಂಪನ: ಬೆಚ್ಚಿಬಿದ್ದ ಉತ್ತರಕಾಶಿ
ಉತ್ತರಕಾಶಿ, ಮಾ. ೫: ಉತ್ತರಾಖಂಡದಲ್ಲಿ ಸತತ ಮೂರು ಭೂಕಂಪನಗಳು ಸಂಭವಿಸಿದ್ದು, ಜನತೆ ಭಯಭೀತಿಯಿಂದ ಹೊರಗೆ ಓಡಿಬಂದ ಘಟನೆ ವರದಿಯಾಗಿದೆ. ಉತ್ತರಾಖಂಡದ ಉತ್ತರಕಾಶಿಯಲ್ಲಿ ಕೇವಲ ೨೧ ನಿಮಿಷಗಳ ಅಂತರದಲ್ಲಿ ೩ ಕಂಪನಗಳು ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ. ಶನಿವಾರ ತಡರಾತ್ರಿ ಒಂದರ ಹಿಂದೆ ಒಂದರAತೆ ಮೂರು ಬಾರಿ ಭೂಕಂಪನ ಸಂಭವಿಸಿದ್ದು, ಈ ಭೂಕಂಪಗಳ ಕಂಪನದಿAದಾಗಿ ಜನರು ಗಾಬರಿಯಿಂದ ಮನೆಯಿಂದ ಹೊರಬಂದರು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೨.೫ರಷ್ಟಿತ್ತು. ಕಂಪನದಿAದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಭೂಕಂಪನದ ಕೇಂದ್ರ ಬಿಂದು ಉತ್ತರ ಕಾಶಿಯ ತಹಸಿಲ್ ಭಟ್ವಾಡಿಯ ಸಿರೋಹ್ ಅರಣ್ಯ ಕೇಂದ್ರಿತವಾಗಿತ್ತು ಎಂದು ಭೂಕಂಪನ ಮಾಪನ ಕೇಂದ್ರದ ಮೂಲಗಳು ತಿಳಿಸಿವೆ. ಉತ್ತರಕಾಶಿಯಲ್ಲಿ ತಡರಾತ್ರಿ ೧೨:೪೦ಕ್ಕೆ ಇದ್ದಕ್ಕಿದ್ದಂತೆ ಪಾತ್ರೆಗಳು ಅಲುಗಾಡುವ ಸದ್ದು, ಕಿಟಕಿ ಗಾಜುಗಳ ಸದ್ದು ಕೇಳಿಸಿತು. ಇದಾದ ಸ್ವಲ್ಪ ಸಮಯದ ನಂತರ, ೧೨:೪೫ಕ್ಕೆ, ಭೂಕಂಪದ ಎರಡನೇ ಕಂಪನವು ಅನುಭವವಾಯಿತು, ಇದರಿಂದಾಗಿ ಜನರು ಭಯಭೀತರಾಗಿದ್ದರು. ಅದೇ ಸಮಯದಲ್ಲಿ, ಸ್ವಲ್ಪ ಸಮಯದ ನಂತರ ೧:೦೧ಕ್ಕೆ ಮೂರನೇ ಕಂಪನ ಸಂಭವಿಸಿತು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಆಸ್ಟೆçÃಲಿಯಾದ ಹಿಂದೂ ದೇವಾಲಯದಲ್ಲಿ ಮತ್ತೆ ಭಾರತ ವಿರೋಧಿ ಬರಹ
ಬ್ರಿಸ್ಬೇನ್, ಮಾ. ೫: ಆಸ್ಟೆçÃಲಿಯಾದ ಬ್ರಿಸ್ಬೇನ್ನಲ್ಲಿರುವ ಲಕ್ಷಿö್ಮà ನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಖಲಿಸ್ತಾನಿ ವಿಧ್ವಂಸಕ ಬರಹಗಳನ್ನು ಗೀಚಿ ದೇವಸ್ಥಾನವನ್ನು ವಿರೂಪಗೊಳಿಸಿರುವ ಘಟನೆ ಶನಿವಾರ ನಡೆದಿದೆ. ಕಳೆದ ಎರಡು ತಿಂಗಳಲ್ಲಿ ಆಸ್ಟೆçÃಲಿಯಾದ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ೪ನೇ ದಾಳಿ ಇದಾಗಿದೆ. ಖಲಿಸ್ತಾನಿ ಬೆಂಬಲಿಗರು ದೇವಸ್ಥಾನವನ್ನು ವಿರೂಪಗೊಳಿಸಿದ್ದಾರೆ. ಗೋಡೆ ಮೇಲೆ ಭಾರತಕ್ಕೆ ದಿಕ್ಕಾರ, ಮೋದಿ ಟೆರರಿಸ್ಟ್ ಎಂದೆಲ್ಲಾ ಗೀಚಲಾಗಿದೆ. ಅಲ್ಲದೆ, ಖಲಿಸ್ತಾನಿ ರಾಷ್ಟçದ ಹೋರಾಟಕ್ಕೆ ಅಡ್ಡಿ ಮಾಡದಂತೆ ಪಂಜಾಬಿಗಳಿಗೆ ಕರೆ ನೀಡಲಾಗಿದೆ. ಶನಿವಾರ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ದೇವಸ್ಥಾನದ ಅಧ್ಯಕ್ಷ ಸತೀಂದರ್ ಶುಕ್ಲಾ ತಿಳಿಸಿದ್ದಾರೆ. ಇತ್ತೀಚೆಗೆ ಬ್ರಿಸ್ಬೇನ್'ನ ಗಾಯತ್ರಿ ದೇವಸ್ಥಾನಕ್ಕೆ ಪಾಲಿಸ್ತಾನ ಮೂಲದ ಖಲಿಸ್ತಾನಿ ಬೆಂಬಲಿಗರಿAದ ಬೆದರಿಕೆ ಕರೆ ಬಂದಿತ್ತು. ಇದು ದ್ವೇಷವನ್ನು ಹರಡುವ ಮೂಲಕ ಆಸ್ಟೆçÃಲಿಯಾದ ಹಿಂದೂಗಳನ್ನು ಹೆದರಿಸುವ ಸಿಖ್ ಫಾರ್ ಜಸ್ಟೀಸ್ನ ಮಾದರಿಯಾಗಿದೆ ಎಂದು ಹಿಂದೂ ಮಾನವ ಹಕ್ಕುಗಳ ನಿರ್ದೇಶಕಿ ಸಾರಾ ಎಲ್ ಗೇಟ್ಸ್ ಅವರು ಹೇಳಿದ್ದಾರೆ.