ಮಡಿಕೇರಿ, ಮಾ. ೫: ಕಳೆದ ಒಂಭತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ನಡೆಸಿರುವ ಬಿಜೆಪಿ ಇಂಧನ ತೈಲದ ಬೆಲೆಯನ್ನು ೪೭ ಬಾರಿ ಹೆಚ್ಚಿಸಿ, ಕೋಟ್ಯಂತರ ಹಣವನ್ನು ಸಾರ್ವಜನಿಕ ರಿಂದ ಲೂಟಿ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಎಂ. ಲಕ್ಷö್ಮಣ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಅಡುಗೆ ಅನಿಲದ ದರವನ್ನು ಏಕಾಏಕಿ ಹೆಚ್ಚಳ ಮಾಡಿರುವ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ.
ಕಚ್ಚಾ ತೈಲದ ದರ ಅಂರ್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ಗೆ ೭೭ ಡಾಲರ್ ಇದೆ. ಇದರಿಂದ ಅನಿಲ ಉತ್ಪಾದನೆಗೆ ಕೇವಲ ೪೫೦ ರೂ. ತಗುಲುತ್ತದೆ. ಆದರೆ, ಇಂದು ಅಡುಗೆ ಅನಿಲದ ದರವನ್ನು ಹಾಗೂ ಕಮರ್ಷಿಯಲ್ ಅನಿಲ ಸಿಲಿಂಡರ್ ದರವನ್ನು ಹೆಚ್ಚಿಸುವ ಮೂಲಕ ಪ್ರತಿ ಅಡುಗೆ ಸಿಲಿಂಡರ್ನಿAದ ಹೆಚ್ಚುವರಿ ೭೫೦ ರೂ.ಗಳನ್ನು ಹಾಗೂ ಕಮರ್ಷಿಯಲ್ ಸಿಲಿಂಡರ್ನಿAದ ೧೨೫೦ ರೂ. ಲಾಭವನ್ನು ಕೇಂದ್ರ ಪಡೆಯುತ್ತಿರುವುದಾಗಿ ದೂರಿದರು.
ಕಳೆದ ೯ ವರ್ಷದ ಆಡಳಿತದಲ್ಲಿ ಕೆೆÃಂದ್ರದ ಬಿಜೆಪಿ ಸರ್ಕಾರ ಇಂಧನ ತೈಲ, ಗ್ಯಾಸ್ ಸಿಲಿಂಡರ್ಗಳ ದರ ಹೆಚ್ಚಳದ ಮೂಲಕ ೩೦ ಲಕ್ಷ ಕೋಟಿ ರೂ.ಗಳನ್ನು ಲೂಟಿ ಹೊಡೆದಿದೆ ಎಂದು ಆಪಾದಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ನ ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿ ಇದ್ದ ೨೦೧೧ ರಲ್ಲಿ ಅಡುಗೆ ಅನಿಲದ ದರ ೩೯೦ ರೂ.ಗಳಿತ್ತು. ಇದು ೨೦೧೪ ಕ್ಕೆ ೪೫೦ ರೂ.ಗಳಿಗಷ್ಟೆ ಏರಿತ್ತು. ಆ ಹಂತದಲ್ಲಿ ಅಡುಗೆ ಅನಿಲ ದರವನ್ನು ರೂ. ೧೫ ಹೆಚ್ಚಿಸಿದ ಸಂದರ್ಭ ಬಿಜೆಪಿಯ ಸ್ಮೃತಿ ಇರಾನಿ ಅವರು, ದರ ಹೆಚ್ಚಳ ವಿರೋಧಿಸಿ ಟೀಕಿಸಿದ್ದರು. ಈಗ ಅವರ ಆಕ್ರೋಶ ಎಲ್ಲಿದೆ ಎಂದು ಲಕ್ಷö್ಮಣ್ ಪ್ರಶ್ನಿಸಿದರು. ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ.೧೭ ರಷ್ಟು ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಘೋಷಣೆ ಜಾರಿಯಾಗುವುದೇ ಅನುಮಾನವೆಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಹೆಚ್.ಎಸ್. ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಮಾಜಿ ಸಚಿವ ಬಿ.ಎ. ಜೀವಿಜಯ, ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ, ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಎನ್. ರಾಮು ಉಪಸ್ಥಿತರಿದ್ದರು.