ಗೋಣಿಕೊಪ್ಪ ವರದಿ, ಮಾ. ೩: ಮಾಯಮುಡಿ ಗ್ರಾಮದಲ್ಲಿ ನಡೆದ ಹುಲಿ ದಾಳಿಗೆ ಕೃಷಿಕ ನಂದೀಶ್ ಅವರಿಗೆ ಸೇರಿದ ಕರು ಬಲಿಯಾಗಿದೆ. ಸ್ಥಳಕ್ಕೆ ತಿತಿಮತಿ ಅರಣ್ಯ ವಲಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಬೋನ್ ಇಟ್ಟು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಶುಕ್ರವಾರ ಮುಂಜಾನೆ ೩ ಗಂಟೆ ಸುಮಾರಿಗೆ ದಾಳಿ ನಡೆದಿದೆ. ಮನೆಯ ಸಮೀಪ ಕಟ್ಟಿದ್ದ ಕರುವನ್ನು ಹಿಡಿಯಲು ಬಂದಾಗ ಮನೆಯ ಜನರು ಕೂಗಿಕೊಂಡಾಗ ಸ್ವಲ್ಪ ಭಾಗವನ್ನು ತಿಂದು ಸ್ಥಳದಿಂದ ಕಾಲ್ಕಿತ್ತಿದೆ. ಕರುವಿನ ಕಳೇಬರವನ್ನು ಬೋನ್‌ನಲ್ಲಿ ಇಟ್ಟು ಸೆರೆಗೆ ಕ್ರಮಕೈಗೊಳ್ಳಲಾಗಿದೆ.