ಗೋಣಿಕೊಪ್ಪಲು, ಮಾ. ೩: ವಿದ್ಯಾನಗರಿ ಎಂದೇ ಖ್ಯಾತಿ ಪಡೆದಿರುವ ಗೋಣಿಕೊಪ್ಪಲುವಿನಲ್ಲಿ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ವ್ಯವಸ್ಥೆಗಳು ಭರದಿಂದ ಸಾಗುತ್ತಿವೆ. ಕನ್ನಡದ ಕಹಳೆ ಮೊಳಗಿಸಲು ಸಮಿತಿಯ ಸರ್ವ ಸದಸ್ಯರು ದಿನವಿಡಿ ದುಡಿಯುತ್ತಿದ್ದಾರೆ. ನಗರದ ೨ ಬದಿಯಲ್ಲಿ ಕನ್ನಡದ ಬಾವುಟಗಳು ಹಾಗೂ ಬಂಟಿAಗ್ಸ್ಗಳು ರಾರಾಜಿಸುತ್ತಿವೆ. ಕಾರ್ಯಕ್ರಮ ನಡೆಯುವ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯು ಶೃಂಗಾರಗೊAಡಿದ್ದು ಕನ್ನಡಾಭಿಮಾನಿಗಳಿಗೆ ಕುಳಿತುಕೊಳ್ಳಲು ಎರಡು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಸಮಿತಿಯ ಸದಸ್ಯರು, ಆಟೋ ಚಾಲಕರು ತಡರಾತ್ರಿ ಯವರೆಗೂ ರಸ್ತೆಯ ಉದ್ದಗಲಕ್ಕೂ ಕನ್ನಡದ ಬಾವುಟಗಳನ್ನು ಕಟ್ಟುವ ಮೂಲಕ ತಮ್ಮನ್ನು ಕನ್ನಡದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ೧೬ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಬೆಳಿಗ್ಗೆ ೮ ಗಂಟೆಗೆ ನಡೆಯಲಿವೆ. ನಗರದ ಮುಖ್ಯ ದ್ವಾರಗಳು ಅಲಂಕೃತಗೊAಡಿದ್ದು ನಾಡಿಗೆ ಸೇವೆ ಸಲ್ಲಿಸಿ ಕಣ್ಮರೆಯಾದ ಹಿರಿಯ ೧೦ ಸಾಧಕರನ್ನು ಗುರುತಿಸಿ ಅವರ ನೆನಪಿನ ದ್ವಾರಗಳು ಮುಂಜಾನೆ ೮.೩೦ಕ್ಕೆ ಸರಿಯಾಗಿ ಏಕಕಾಲದಲ್ಲಿ ಉದ್ಘಾಟನೆಗೊಳ್ಳಲಿದೆ.
ಸಮ್ಮೇಳನದ ಅಧ್ಯಕ್ಷೆ ಜಿಲ್ಲೆಯ ಹಿರಿಯ ಸಾಹಿತಿ ಡಾ. ಎಂ.ಪಿ. ರೇಖಾ ಅವರನ್ನು ವಿಶೇಷ ಅಲಂಕೃತ ವಾಹನದಲ್ಲಿ ಸಮ್ಮೇಳನದ ಅಧ್ಯಕ್ಷರನ್ನು ವೇದಿಕೆಗೆ ಕರೆ ತರಲಿದ್ದಾರೆ. ನಗರದ ಪಾಲಿಬೆಟ್ಟ ರಸ್ತೆ ತಿರುವಿನಿಂದ ಮೆರವಣಿಗೆಯು ಹೊರಡಲಿದ್ದು ಮೆರವಣಿಗೆಯಲ್ಲಿ ಮಂಗಳವಾದ್ಯ ಚಂಡೆ, ಕಲಶ ಹೊತ್ತ ಮಹಿಳೆಯರು, ಸ್ತಬ್ಧಚಿತ್ರಗಳು, ಗೊಂಬೆಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕೊಡಗಿನ ವಾಲಗ ಬ್ಯಾಂಡ್ ಸೆಟ್, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಅಂಗನವಾಡಿ ಸಂಘಟನೆ, ಸ್ತಿçÃಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ಸಂಘ-ಸAಸ್ಥೆಗಳ ಮತ್ತು ಸಮಾಜಗಳ ಪ್ರತಿನಿಧಿಗಳು ಆಟೋ ಮತ್ತು ವಾಹನ ಚಾಲಕ ಸಂಘದವರು, ಎನ್ಸಿಸಿ ಮತ್ತು ಸ್ಕೌಟ್ ಅಂಡ್ ಗೈಡ್ಸ್ ತಂಡ ಇತ್ಯಾದಿಗಳೊಂದಿಗೆ ಸಾವಿರಾರು ಕನ್ನಡ ಅಭಿಮಾನಿಗಳ ಬೃಹತ್ ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ. ೨ ದಿನಗಳ ಕಾಲ ವೈವಿಧ್ಯಮಯ ಕನ್ನಡ ಪರ ಕಾರ್ಯಕ್ರಮಗಳು ಮನತಣಿಸಲಿದ್ದು, ಸಾವಿರಾರೂ ಸಂಖ್ಯೆಯ ಕನ್ನಡಾಭಿಮಾನಿಗಳು ಬರುವ ನಿರೀಕ್ಷೆ ಇದೆ.
ನಗರದಲ್ಲಿ ಎರಡು ದಿನಗಳು ಹಬ್ಬದ ವಾತಾವರಣ ಕಂಡು ಬರಲಿದೆ. ಡಿವೈಎಸ್ಪಿ ನಿರಂಜನ್ ರಾಜೇ ಅರಸ್ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆ ಕೈಗೊಂಡಿದ್ದು ಮೆರವಣಿಗೆ ದಿನವಾದ ತಾ. ೪ರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ನಗರದಲ್ಲಿ ವಾಹನ ನಿಲುಗಡೆಯನ್ನು ನಿಷೇಧಗೊಳಿಸಲಾಗಿದೆ. ಬದಲಿ ಮಾರ್ಗದಿಂದ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿರುವ ಬಗ್ಗೆ ಡಿವೈಎಸ್ಪಿ ತಿಳಿಸಿದ್ದಾರೆ.
- ಹೆಚ್.ಕೆ. ಜಗದೀಶ್