ಗೋಣಿಕೊಪ್ಪಲು, ಮಾ. ೩: ೯ನೇ ಅಂರ್ರಾಷ್ಟಿçÃಯ ಅಬಾಕಸ್ ಸ್ಪರ್ಧೆಯಲ್ಲಿ ಗೋಣಿಕೊಪ್ಪಲುವಿನ ಬೈನೋಬ್ರೆöÊನ್ ಸಂಸ್ಥೆ ಸಾಧನೆಗೈದಿದೆ.
ವಿದ್ಯಾರ್ಥಿಗಳಾದ ಪಿ.ಎಂ. ಖಧೀಜ, ದೀಕ್ಷನಾಯಕ್, ಮೌಲ್ಯ ಮುತ್ತಣ್ಣ, ನಿಧಿನಾಯಕ್, ಆತ್ಮಿಕ್ ದೀಪ್, ದೃವ ನಾಣಯ್ಯ, ಹರೀತ್ ಕರುಂಬಯ್ಯ, ಮೋನಿತ್ ಕಾರ್ಯಪ್ಪ, ನೂತನ್, ರಿಷಬ್ ಕಾರ್ಯಪ್ಪ, ಉತ್ಕರ್ಷ್ ಉತ್ತಯ್ಯ ಹಾಗೂ ಉತ್ಸವ್ ಉತ್ತಪ್ಪ, ಈ ಸ್ಪರ್ಧೆಯಲ್ಲಿ ಭಾಗವಹಿಸಿ ೧೨ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಂಸ್ಥೆಯ ತರಬೇತುದಾರರಾದ ರೂಪ ಯತಿರಾಜ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಆನ್ಲೈನ್ನಲ್ಲಿ ನಡೆದ ಸ್ಪರ್ಧೆಯಲ್ಲಿ ೮೪ ದೇಶದ ಒಟ್ಟು ೨೦,೬೦೩ ವಿದ್ಯಾರ್ಥಿಗಳು ಭಾಗವಹಿಸಿದ್ದರು.