ಮಡಿಕೇರಿ, ಮಾ. ೨ : ಕರ್ನಾಟಕ ರಾಜ್ಯದ ಎಲ್ಲ ಸರಕಾರಿ ಹುದ್ದೆಗಳನ್ನು ಬಿಜೆಪಿ ಸರಕಾರ ಮಾರಾಟಕ್ಕಿಟ್ಟಿದ್ದು, ಎಚ್ಚೆತ್ತುಕೊಂಡು ಸರಕಾರವನ್ನು ಕಿತ್ತೊಗೆಯದಿದ್ದಲ್ಲಿ ಮುಂದೊAದು ದಿನ ಕರ್ನಾಟಕ ರಾಜ್ಯವನ್ನೇ ಮಾರಾಟ ಮಾಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ, ಇಂಜಿನಿಯರ್, ರಿಜಿಸ್ಟಾçರ್, ಡಿಸಿಸಿ ಬ್ಯಾಂಕ್ ಹುದ್ದೆ ಸೇರಿದಂತೆ ಕೆಎಂಎಫ್ ಹುದ್ದೆಗಳನ್ನು ಬಿಜೆಪಿ ಸರಕಾರ ಲಕ್ಷ, ಕೋಟಿಗಟ್ಟಲೆ ಹಣಕ್ಕೆ ಮಾರಾಟಕ್ಕಿಟ್ಟಿದೆ. ಇದರೊಂದಿಗೆ ನರ್ಸಿಂಗ್ ತರಬೇತಿ ಕೇಂದ್ರಗಳನ್ನೂ ಕೂಡ ಮಾರಾಟಕ್ಕಿಟ್ಟಿದೆ. ಇದರ ವಿರುದ್ಧ ಎಲ್ಲರೂ ಎಚ್ಚೆತ್ತುಕೊಂಡು ಒಟ್ಟಾಗಿ ಹೋರಾಟ ಮಾಡದಿದ್ದರೆ ಒಂದೊAದೇ ಆಸ್ತಿಗಳನ್ನು ಕೂಡ ಮಾರಾಟ ಮಾಡಿ ಕೊನೆಗೆ ಕರ್ನಾಟಕ ರಾಜ್ಯವನ್ನೇ ಮಾರಾಟ ಮಾಡಲಿದೆ. ಕಾಂಗ್ರೆಸ್ಗಿAತ ಹೆಚ್ಚಾಗಿ ರಾಜ್ಯವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ಸರಕಾರ ರಾಜ್ಯದ ಜನತೆಗೆ ಶಾಪವಾಗಿದ್ದು,
(ಮೊದಲ ಪುಟದಿಂದ) ದೇಶದೆಲ್ಲೆಡೆ ಕಮಿಶನ್ ಸರಕಾರವೆಂದೇ ಪ್ರಸಿದ್ಧಿಯಾಗಿದೆ. ಈ ಮಾತನ್ನು ಕಾಂಗ್ರೆಸ್ ಹೇಳುತ್ತಿಲ್ಲ, ೫೦ಸಾವಿರ ಮಂದಿ ಗುತ್ತಿಗೆದಾರರು ಸರಕಾರದ ಶೇ.೪೦ರ ಕಮಿಷನ್ ಬಗ್ಗೆ ಪ್ರಧಾನ ಮಂತ್ರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಕಮಿಷನ್ ಹಾವಳಿಯಿಂದಾಗಿ ಹಲವು ಮಂದಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಶಾಲೆಗಳಿಂದಲೂ ಕಮಿಷನ್ ಪಡೆದಿರುವ ಬಗ್ಗೆಯೂ ಲೂಪ್ಸಾ ಎಂಬ ಸಂಸ್ಥೆ ಪ್ರಧಾನಿಗೆ ಪತ್ರ ಬರೆದಿದೆ. ಇದೀಗ ಲಿಂಗಾಯತ ಸಮಾಜದ ಮಠಗಳಿಂದಲೂ ಶೇ.೧೦ರ ರಿಯಾಯಿತಿಯಲ್ಲಿ ಕಮಿಷನ್ ಕೇಳಿರುವ ಬಗ್ಗೆ ಸ್ವಾಮೀಜಿಗಳು ಆರೋಪಿಸಿದ್ದಾರೆ. ‘ತಾವು ತಿನ್ನಲ್ಲ, ಇತರರಿಗೆ ತಿನ್ನಲೂ ಬಿಡುವದಿಲ್ಲ’ ಎಂದೇ ಹೇಳಿಕೊಂಡು ಬರುತ್ತಿದ್ದ ಸರಕಾರದ ಪರಿಸ್ಥಿತಿ ‘ತಿನ್ನು, ತಿನ್ನಿಸು, ಲೂಟಿ ಮಾಡು’ ಎಂಬAತಾಗಿದೆ ಎಂದು ವ್ಯಂಗ್ಯವಾಡಿದರು. ಇದು ಡಬಲ್ ಇಂಜಿನ್ ಸರಕಾರವಲ್ಲ, ಡಬಲ್ ಭ್ರಷ್ಟಾಚಾರದ ಸರಕಾರವೆಂದು ಆರೋಪಿಸಿದರು.
ಕಾಂಗ್ರೆಸ್ನಿAದ ತನಿಖೆ
ಪೊಲೀಸ್ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಹಿರಿಯ ಅಧಿಕಾರಿಯೋರ್ವರು ಜೈಲು ಸೇರಿರುವದು ಬಿಜೆಪಿ ಸರಕಾರದಲ್ಲಿಯೇ. ಈ ಅಕ್ರಮ ನಡೆದ ಸಂದರ್ಭ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹಾಗೂ ಬಸವರಾಜ ಬೊಮ್ಮಾಯಿ ಅವರು ಗೃಹಮಂತ್ರಿ ಆಗಿದ್ದರು. ಇವರುಗಳ ಮೇಲೆ ತನಿಖೆ ಮಾಡುವರಾರು ಎಂದು ಪ್ರಶ್ನಿಸಿದ ಸುರ್ಜೆವಾಲ; ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ತನಿಖೆ ಮಾಡಲಿದೆ ಎಂದು ಹೇಳಿದರು.
ಮನೆ ಮನೆಗೆ ತಲಪಿಸಬೇಕು
ಜನತೆ ಸಂಕಷ್ಟದಲ್ಲಿದ್ದಾರೆ. ಆದರೂ ಸರಕಾರ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ ಮಾಡಿದೆ. ಆದರೆ, ಕಾಂಗ್ರೆಸ್ ಗೃಹಲಕ್ಷಿö್ಮ ಯೋಜನೆ ಮೂಲಕ ಪ್ರತಿ ಗೃಹಿಣಿಯರ ಖಾತೆಗೆ ರೂ.೨ಸಾವಿರ ಜಮೆ ಮಾಡಲಿದೆ. ಯಾವದೇ ಬೇಧ ಭಾವವಿಲ್ಲದೆ ಎಲ್ಲ ಗೃಹಿಣಿಯರ ಖಾತೆಗೆ ಜಮೆ ಆಗಲಿದೆ. ವಿದ್ಯುತ್ಗೆ ಪ್ರತಿ ಯುನಿಟ್ಗೆ ೭.೫೦ ರೂ ಇದ್ದು, ಗೃಹಜ್ಯೋತಿ ಯೋಜನೆಯಲ್ಲಿ ಪ್ರತಿಯೋರ್ವರಿಗೂ ೨೦೦ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವದು. ರಾಜ್ಯದ ೪ ಕೋಟಿ ಮಂದಿಗೆ ಅನ್ನ ಭಾಗ್ಯ ಯೋಜನೆಯಡಿ ೧೦ ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುವದು. ಇದು ರಾಜ್ಯದ ಚಿತ್ರಣವನ್ನು ಬದಲಾಯಿಸುವ ಯೋಜನೆಯಾಗಿದ್ದು, ಕಾಂಗ್ರೆಸ್ ನಾಯಕರುಗಳ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ಪ್ರತಿ ಮನೆ ಮನೆಗಳಿಗೆ ತೆರಳಿ ಗ್ಯಾರಂಟಿ ಕಾರ್ಡನ್ನು ತಲಪಿಸಬೇಕಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮರು ಕ್ಷಣವೇ ಯೋಜನೆ ಜಾರಿಗೊಳ್ಳಲಿದೆ ಎಂದು ಭರವಸೆ ನೀಡಿದರು.
ಲಂಚ ಪಡೆದರೆ ಉಚ್ಚಾಟನೆ
ಕಾಂಗ್ರೆಸ್ನಿAದ ಆಯ್ಕೆಯಾಗುವ ಯಾವದೇ ಶಾಸಕ, ಸಚಿವರುಗಳು ಒಂದು ಪೈಸೆ ಲಂಚ ಪಡೆಯುವಂತಿಲ್ಲ. ಪಡೆದಿರುವ ಬಗ್ಗೆ ಗಮನಕ್ಕೆ ಬಂದ ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡಲಾಗುವದು. ಹಣ ಜನರಿಗೆ ಸೇರಬೇಕೆಂದು ಸುರ್ಜೆವಾಲ ಹೇಳಿದರು. ಶಾಸಕ ಸ್ಥಾನಕ್ಕೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಲಾಗುವದು. ಚುನಾವಣೆ ನಂತರವೂ ತಾನು ಕೊಡಗು ಜಿಲ್ಲೆಯಲ್ಲಿ ಇರುತ್ತೇನೆ. ಟಿಕೆಟ್ ವಂಚಿತರಾದವರು ಕೂಡ ಅಧಿಕಾರದಲ್ಲಿರುವವರಂತೆ ಕೆಲಸ ಮಾಡಬೇಕಾಗಿದೆ. ನಿಗಮ, ಮಂಡಳಿಯಲ್ಲಿ ಅಧಿಕಾರ ನೀಡುವ ಮೂಲಕ ಸೇವೆಗೆ ಅವಕಾಶ ನೀಡಲಾಗುವದು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಉಸ್ತುವಾರಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಜನರಿಗೆ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇದೆ. ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿದೆ. ಈ ಬಾರಿ ಮೂರು ಭರವಸೆಗಳನ್ನು ನೀಡಲಾಗುತ್ತಿದ್ದು, ಒಂದು ವಾರದ ಒಳಗಡೆ ಮನೆ ಮನೆಗೆ ತಲಪಿಸಬೇಕಾಗಿದೆ. ಬಿಜೆಪಿಯವರು ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ, ಅವರ ಬಳಿ ಹೇಳಿಕೊಳ್ಳಲು ಯಾವದೇ ಯೋಜನೆಗಳಿಲ್ಲ. ಕಾಂಗ್ರೆಸ್ ಪರ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಉಸ್ತುವಾರಿ ರೋಜಿ ಜಾನ್, ಮಾಜಿ ಸಚಿವ ಬಿ.ಎ. ಜೀವಿಜಯ, ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಮುಖರುಗಳಾದ ಹೆಚ್.ಎಸ್. ಚಂದ್ರಮೌಳಿ, ಕೆ.ಪಿ.ಚಂದ್ರಕಲಾ, ಟಿ.ಪಿ.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಭಾನು, ಮಂಥರ್ ಗೌಡ, ಹರಪಳ್ಳಿ ರವೀಂದ್ರ, ವಿವಿಧ ಬ್ಲಾಕ್ ಅಧ್ಯಕ್ಷರುಗಳು ಇದ್ದರು. ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಸುರ್ಜೆವಾಲ ಅವರ ಆಂಗ್ಲ ಭಾಷೆಯ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ನಿರೂಪಿಸಿದರು. ಲಿಯಾಕತ್ ಆಲಿ ವಂದೇ ಮಾತರಂ ಹಾಡಿದರು.