ಮಡಿಕೇರಿ, ಮಾ. ೨ : ಶೀಘ್ರದಲ್ಲಿಯೇ ನಿರ್ಮಿಸಲು ಉದ್ದೇಶಿಸಿರುವ ೯೨.೩ ಕಿ.ಮಿ ಮೈಸೂರು - ಕುಶಾಲನಗರ ಚತುಷ್ಪಥ ರಸ್ತೆ ಕಾಮಗಾರಿ ಸಂಬAಧ ೩ ಸಂಸ್ಥೆಗಳು ಗುತ್ತಿಗೆ ಪಡೆದಿವೆ.

ರೂ. ೩,೪೭೦ ಕೋಟಿ ವೆಚ್ಚದಲ್ಲಿ ಭಾರತ್ ಮಾಲಾ ಪರಿಯೋಜನಾ ಯೋಜನೆಯಡಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು, ಗುಡ್ಡೆಹೊಸೂರಿನಿಂದ ಶ್ರೀರಂಗಪಟ್ಟಣದವರೆಗೆ ಚತುಷ್ಪಥ ನಿರ್ಮಾಣವಾಗಿ ೧೧೯ ಕಿ.ಮೀ ಮೈಸೂರು - ಬೆಂಗಳೂರು ಎಕ್ಸ್ಪ್ರೆಸ್ ವೇಗೆ ಸಂಪರ್ಕ ಹೊಂದಲಿದೆ.

ಒಟ್ಟು ೧೧ ಬಿಡ್ಡರ್‌ಗಳ ಪೈಕಿ, ಕೆ.ಎನ್.ಆರ್. ಕನ್ಸಟ್ರಕ್ಷನ್ ರಾಮಲಿಂಗA ಕನ್ಸಟ್ರಕ್ಷನ್ ಹಾಗೂ ಡಿ.ವೈ ಅಪ್ಪರ್ ಆ್ಯಂಡ್ ಸನ್ಸ್ ಸಂಸ್ಥೆಗಳು ಕಡಿಮೆ ಅಂದಾಜು ವೆಚ್ಚ ನೀಡಿದ ಕಾರಣ ರಸ್ತೆ ನಿರ್ಮಾಣದ ಅವಕಾಶ ಪಡೆದುಕೊಂಡಿವೆ.

ರೂ. ೬೧೭.೧೪ ಕೋಟಿ ಅಂದಾಜು ವೆಚ್ಚದ ಗುಡ್ಡೆಹೂಸೂರು ಕುಶಾಲನಗರ ಬೈಪಾಸ್‌ನಿಂದ ಹಾಸನ ಪಿರಿಯಾಪಟ್ಟಣ ಜಂಕ್ಷನ್‌ವರೆಗಿನ ೨೨.೭ ಕಿ.ಮೀ ರಸ್ತೆಯ ಕಾಮಗಾರಿಯ ಹಕ್ಕನ್ನು ಡಿ.ವೈ ಅಪ್ಪರ್ ಆ್ಯಂಡ್ ಸನ್ಸ್ ಪಡೆದುಕೊಂಡಿದೆ.

ಹಾಸನ ಪಿರಿಯಾಪಟ್ಟಣ ಜಂಕ್ಷನ್‌ನಿAದ ರಾಮನಾಥಾಪುರ ಟೆರೇಕ್ಕನಂಬಿ ರಸ್ತೆ, ಕೆ.ಆರ್ ನಗರ ಜಂಕ್ಷನ್ ಒಟ್ಟು ೨೪.೧ ಕಿ.ಮೀ ಆಗಿದ್ದು ರೂ.೫೮೯.೫ ಕೋಟಿ ವೆಚ್ಚವಾಗಲಿದ್ದು ರಾಮಲಿಂಗA ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ.

ರೂ. ೬೫೯.೪೮ ಕೋಟಿ ಅಂದಾಜು ವೆಚ್ಚದ ೨೬.೫ ಕಿ.ಮೀ ರಾಮನಾಥಾಪುರ ಟೆರೇಕ್ಕನಂಬಿ ರಸ್ತೆಯಿಂದ ಇಲವಾಲ ಕೆ.ಆರ್. ನಗರ ಜಂಕ್ಷನ್‌ವರೆಗಿನ ರಸ್ತೆ ಕಾಮಗಾರಿ ಗುತ್ತಿಗೆಯನ್ನು ಕೆ.ಎನ್.ಆರ್. ಸಂಸ್ಥೆ ಪಡೆದುಕೊಂಡಿದೆ.

ರೂ.೬೬೨.೮೩ ಕೋಟಿ ಅಂದಾಜು ವೆಚ್ಚದ ೧೮.೯೮ ಕಿ.ಮೀ ಇಲವಾಲ ಕೆ.ಆರ್ ನಗರ ಜಂಕ್ಷನ್‌ನಿAದ ಶ್ರೀರಂಗಪಟ್ಟಣ ಬೈಪಾಸ್‌ವರೆಗಿನ ರಸ್ತೆ ಕಾಮಗಾರಿಯನ್ನು ಕೆ.ಎನ್.ಆರ್. ಸಂಸ್ಥೆ ನಿರ್ವಹಿಸಲಿದೆ.