ಮಡಿಕೇರಿ, ಮಾ. ೨: ಮಡಿಕೇರಿ ತಾಲೂಕು ಕರ್ಣಂಗೇರಿ ಗ್ರಾಮದ ಸರ್ವೆ ನಂ.೪೭೧/೧ ರಲ್ಲಿ ೦.೧೨ ಎಕರೆ ಮತ್ತು ಸರ್ವೆ ನಂ.೪೭೧/೪ ರಲ್ಲಿ ೦.೨೦ ಎಕರೆ ಜಾಗವನ್ನು ಸರ್ವೆಯಿಂದ ಗುರುತಿಸಿದ ನಕಾಶೆಯಂತೆ ಗಾಂಧೀಜಿ ಚಿತಾಭಸ್ಮವನ್ನಿಟ್ಟು ಶಾಶ್ವತವಾದ ಸ್ಮಾರಕ ನಿರ್ಮಿಸಲು ರೂ. ೫೦ ಲಕ್ಷವನ್ನು ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಮೂಲಕ ಜಿಲ್ಲಾಧಿಕಾರಿ ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಬಿಡುಗಡೆ ಮಾಡಲು ಮಂಜೂರಾತಿ ನೀಡಿ ಆದೇಶ ಹೊರಡಿಸಲಾಗಿದೆ. ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಯತ್ನದಿಂದ ರೂ. ೫೦ ಲಕ್ಷ ಅನುದಾನ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.