ಕೂಡಿಗೆ, ಮಾ. ೧: ರಾಜ್ಯ ಸರ್ಕಾರದ ವತಿಯಿಂದ ಕಾವೇರಿ ನೀರಾವರಿ ನಿಗಮದ ಮೂಲಕ ಅನುಮೋದನೆಗೊಂಡು ಗ್ರಾಮೀಣ ಪ್ರದೇಶಗಳ ಒಂದು ಕೋಟಿಗೂ ಅಧಿಕ ವೆಚ್ಚದ ಉಪ ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದ್ದು, ಶೇ. ೮೦ ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ.
ಶಿರAಗಾಲ, ಹೆಬ್ಬಾಲೆ, ತೊರೆನೂರು, ಕೂಡುಮಂಗಳೂರು, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಗುತ್ತಿಗೆದಾರರಾದ ಬಿ.ಎಸ್.ಆರ್. ಗ್ರೂಪ್ನ ಇಂಜಿನಿಯರ್ ಕಿರಣ್ ಕುಮಾರ್ ತಂಡದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಉಸ್ತುವಾರಿಯನ್ನು ಹಾರಂಗಿ ವಿಭಾಗದ ಸಹಾಯಕ ಅಭಿಯಂತರ ಇಂಜಿನಿಯರ್ ಪುಟ್ಟಸ್ವಾಮಿ ನಿರ್ವಹಿಸುತ್ತಿದ್ದಾರೆ.