ನಾಪೋಕ್ಲು, ಮಾ. ೧: ಸ್ಥಳೀಯ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಎ.ಕೆ. ಚಂದ್ರನ್, ಉಪಾಧ್ಯಕ್ಷರಾಗಿ ಟಿ.ಎಸ್. ಶ್ರೀಧರ್, ಕಾರ್ಯದರ್ಶಿಯಾಗಿ ಟಿ.ಸಿ. ರಾಜೀವ, ಸಹಕಾರ್ಯದರ್ಶಿಯಾಗಿ ಟಿ.ಎ. ತಂಗನ್ ಹಾಗೂ ಕೋಶಾಧಿಕಾರಿಯಾಗಿ ಕೆ.ಬಿ. ವಿನಿಲ್ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಕೆ. ಮಹೇಶ್, ಪಿ.ಕೆ. ಸುನಿಲ್, ಪಿ.ಸಿ. ಕಿಶೋರ್, ಪಿ.ಸಿ. ಸಂತೋಷ್, ಟಿ.ಎ. ರವಿ, ಟಿ.ಎನ್. ಮಹೇಶ್, ಟಿ.ಪಿ. ಜಗದೀಶ್ ಟಿ.ಕೆ. ಕೃಷ್ಣ, ಕೆ.ಕೆ. ಸುಕುಮಾರ್, ಟಿ.ಕೆ. ಬಾಲಕೃಷ್ಣ , ರಾಜು ಮೊಣ್ಣಪ್ಪ ಕೆ.ಕೆ. ವಿನೋದ್ ಆಯ್ಕೆಯಾದರು.

ದೇವಾಲಯದ ಸಭಾಂಗಣದಲ್ಲಿ ನಡೆದ ದೇವಾಲಯದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.