ಮಡಿಕೇರಿ, ಮಾ. ೧: ಮಂಗಳೂರಿನ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್ ವತಿಯಿಂದ ಸಂತ ಅಲೋಷಿಯಸ್ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ತಂಡಗಳಿಗೆ ಹಾಕಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ೯ ತಂಡಗಳು ಪಾಲ್ಗೊಂಡಿದ್ದು, ಮುಖ್ಯ ಅತಿಥಿಗಳಾಗಿ ಕುಟ್ಟಂಡ ಶೋಭಿತಾ ಬೆಳ್ಯಪ್ಪ ಹಾಗೂ ಸಂತ ಅಲೋಷಿಯಸ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಅರುಣ್ ಎಂ. ಡಿಸೋಜಾ ಅವರುಗಳು ಪಾಲ್ಗೊಂಡಿದ್ದರು.
ಸAಘಟನೆಯ ಸಲಹೆಗಾರರಾದ ಸೋಮೆಯಂಡ ಚಂಗಪ್ಪ ಹಾಗೂ ಬಟ್ಟೀರ ಅಜಿತ್ ಬೋಪಯ್ಯ ಮಾರ್ಗದರ್ಶನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಕೋಡಿರ ಭಜನ್ ಅಚ್ಚಯ್ಯ ನಾಯಕತ್ವದ ಭಗವತಿ ತಂಡ ವಿನ್ನರ್ಸ್ ಹಾಗೂ ಪುದಿಯೊಕ್ಕಡ ಸುಮನ್ ಮುತ್ತಣ್ಣ ನಾಯಕತ್ವದ ಇಗ್ಗುತ್ತಪ್ಪ ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿತು.
ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಮಂಡೇಪAಡ ನಂಜಪ್ಪ, ಉಪಾಧ್ಯಕ್ಷೆ ಬಾಚಿನಾಡಂಡ ಶಿಮ್ಲಾ ಗಣಪತಿ, ಪದಾಧಿಕಾರಿಗಳಾದ ಬಾಳೆಯಡ ರಿಶಿಕಾ ತಿಮ್ಮಯ್ಯ, ಮಂಡುವAಡ ತಮ್ಮಯ್ಯ, ಚೀಕಂಡ ಪ್ರಕೃತಿ ಪೊನ್ನಣ್ಣ ಮತ್ತಿತರರು ಉಸ್ತುವಾರಿ ವಹಿಸಿದ್ದರು.