ಮಡಿಕೇರಿ, ಮಾ. ೧: ಬಾಡಗರಕೇರಿಯಲ್ಲಿನ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿಂದು ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿ ಶತರುದ್ರಾಭಿಷೇಕ ಪೂಜಾ ಕೈಂಕರ್ಯ ಏರ್ಪಡಿಸಲಾಗಿತ್ತು. ಇದರೊಂದಿಗೆ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಾಹನ ನಿಲುಗಡೆ ಸ್ಥಳದ ಉದ್ಘಾಟನಾ ಕಾರ್ಯಕ್ರಮವೂ ಜರುಗಿತು.

ಸುಮಾರು ರೂ. ೪೫ ಲಕ್ಷ ವೆಚ್ಚದಲ್ಲಿ ದೇವಾಲಯದ ಮುಂಭಾಗದ ಪ್ರದೇಶದಲ್ಲಿ ಇಂಟರ್‌ಲಾಕ್ ಅಳವಡಿಕೆಯೊಂದಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಪ್ರದೇಶದಲ್ಲಿ ಇದೀಗ ಅಂದಾಜು ೧೫೦ ರಷ್ಟು ವಾಹನಗಳನ್ನು ವ್ಯವಸ್ಥಿತವಾಗಿ ನಿಲುಗಡೆಗೊಳಿಸಬಹುದಾಗಿದೆ. ನಾಡಿನ ಹಿರಿಯರು, ಶತಾಯುಷಿಗಳಾಗಿರುವ ಕುಪ್ಪುಡೀರ ಐ. ಕಾಳಪ್ಪ ಹಾಗೂ ಅಣ್ಣೀರ ಮುತ್ತಮ್ಮ ಚಂಗಪ್ಪ ಅವರುಗಳು ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷರಾದ ಬಲ್ಯಮೀದೇರಿರ ಎಸ್. ಸುರೇಶ್, ಕಾರ್ಯದರ್ಶಿ ಅಣ್ಣೀರ ಪೊನ್ನಣ್ಣ, ಮಾಜಿ ಅಧ್ಯಕ್ಷರಾದ ಚೋನೀರ ಸುಬ್ರಮಣಿ, ಕಾಯಪಂಡ ಎಸ್. ಕಾವೇರಪ್ಪ, ಕುಪ್ಪುಡೀರ ಪೊನ್ನು ಮುತ್ತಪ್ಪ, ದೇವತಕ್ಕರಾದ ಅಣ್ಣೀರ ದಾದ ಗಣಪತಿ, ನಾಡ್ ತಕ್ಕರು ಹಾಗೂ ಮಾಜಿ ಅಧ್ಯಕ್ಷರಾದ ಕಾಯಪಂಡ ಕೆ. ಅಯ್ಯಪ್ಪ, ಮಲ್ಲೇಂಗಡ ಪೆಮ್ಮಯ್ಯ, ಅಣ್ಣೀರ ಪ್ರವೀಣ್, ಅಯ್ಯಮಾಡ ಮುತ್ತಣ್ಣ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಅರ್ಚಕರಾದ ಗಿರೀಶ್ ಹಾಗೂ ಹರೀಶ್ ನೇತೃತ್ವದಲ್ಲಿ ಶತರುದ್ರಾಭಿಷೇಕ ಪೂಜೆ ಜರುಗಿತು.

ಗೌರವ: ಉದ್ಘಾಟನಾ ಕಾರ್ಯಕ್ರಮದ ಸಂದರ್ಭ ಶತಾಯುಷಿಗಳಾದ ಕುಪ್ಪುಡೀರ ಕಾಳಪ್ಪ ಹಾಗೂ ಅಣ್ಣೀರ ಮುತ್ತಮ್ಮ ಅವರುಗಳನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದೇವಾಲಯದ ವಾರ್ಷಿಕ ಉತ್ಸವವು ತಾ. ೧ ರಂದು ರಾತ್ರಿ ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊAಡಿದ್ದು, ತಾ. ೧೧ರ ತನಕ ಜರುಗಲಿದೆ.