ಮಡಿಕೇರಿ, ಮಾ. ೧: ಚಂಡೀಘಡದಲ್ಲಿ ನಡೆದ ರಾಷ್ಟçಮಟ್ಟದ ಪೊಲೀಸ್ ಕ್ರೀಡಾಕೂಟದಲ್ಲಿ ಮಡಿಕೇರಿಯ ಎ.ಆರ್.ಎಸ್.ಐ. ಜಿತೇಂದ್ರ ರೈ, ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಈ ಪಂದ್ಯಾವಳಿಯಲ್ಲಿ ಎಲ್ಲಾ ರಾಜ್ಯದ ಪೊಲೀಸ್ ತಂಡ, ರೈಲೈ, ಶಸಸ್ತç ಸೇನೆ, ಬಿಎಸ್‌ಎಫ್, ಸಿಆರ್‌ಪಿಎಫ್, ಎನ್‌ಎಸ್‌ಜಿ, ದೆಹಲಿಯ ಐ.ಬಿ. ಹಾಗೂ ಸೇನಾಪಡೆಯ ವೈದ್ಯಕೀಯ ತಂಡ ಸೇರಿದಂತೆ ಒಟ್ಟು ೫೮೨ ಸ್ಪರ್ಧಿಗಳು ಪಾಲ್ಗೊಂಡಿದ್ದರು.