ಮಡಿಕೇರಿ, ಮಾ. ೧: ನ್ಯಾಶನಲ್ ಇಂಟೆಗ್ರೇಟೆಡ್ ಮೆಡಿಕಲ್ ಎಸೋಸಿ ಯೇಷನ್(ನಿಮಾ)ನ ಕೊಡಗು ಜಿಲ್ಲಾ ಶಾಖೆಯು ಫೆ. ೨೬ ರ ಸಂಜೆ ಚೆಯ್ಯಂಡಾಣೆ ಸಮೀಪದ ಚೋಮನ ಕುಂದ್ ಬೆಟ್ಟದಲ್ಲಿ ಚಾರಣ ನಡೆಸಿ ಪರಿಸರ ಉಳಿಸುವ ಸಂದೇಶ ಫಲಕಗಳನ್ನು ಇಲಾಖೆಗೆ ಹಸ್ತಾಂತರಿಸಿತು.
ಚೋಮನ ಕುಂದ್ ಅತ್ಯಂತ ಸುಂದರ ಪ್ರವಾಸಿ ತಾಣವಾಗಿದ್ದರೂ ಅದರ ಶಿಖರದ ಮೇಲೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಎಸೆಯುವ ಪ್ರವೃತ್ತಿಯನ್ನು ಖಂಡಿಸಿದ ನಿಮಾ ಅಧ್ಯಕ್ಷ ಡಾ. ರಾಜಾರಾಮ್ ಈ ಕುರಿತು ಎಚ್ಚರ ಮೂಡಿಸಲು ಇದು ಕಿರು ಪ್ರಯತ್ನ.
ಜಿಲ್ಲೆಯಲ್ಲಿ ನಶಿಸಿ ಹೋಗುತ್ತಿರುವ ಔಷಧ ಸಸ್ಯಗಳ ಸಂರಕ್ಷಣೆಯ ಉದ್ದೇಶ ದಿಂದ ವನಸ್ಪತಿ ಉದ್ಯಾನವೊಂದನ್ನು ನಿರ್ಮಿಸುವ ನಮ್ಮ ಆಶಯಕ್ಕೆ ಜಿಲ್ಲಾಡಳಿತವು ಪೂರಕವಾಗಿ ಸ್ಪಂದಿಸುತ್ತಿದೆ ಎಂದರು.
ಕೊಡಗು ಜಿಲ್ಲಾ ಆರೋಗ್ಯ ಭಾರತಿ ಮತ್ತು ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಈ ಸಂಘಟನೆಗಳ ಪರವಾಗಿ ಮಾತನಾಡಿದ ಪ್ರಸಾದ್ ಗೌಡ ಅವರು ನಿಮಾದ ಪರಿಸರ ರಕ್ಷಣೆಯ ಎಲ್ಲಾ ಯೋಜನೆಗಳಿಗೆ ತಮ್ಮ ಬೆಂಬಲವನ್ನು ಘೋಷಿಸಿದರು.
ಕೊಡಗು ಹವ್ಯಕ ವಲಯದ ಮುಖಂಡರಾದ ನಾರಾಯಣ ಮೂರ್ತಿಯವರು ಚಾರಣಿಗರಿಗೆ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಅವರು ವೈದ್ಯರುಗಳ ನಿಸರ್ಗ ಪ್ರೀತಿ ಮುಂದುವರಿಯಲಿ ಎಂದು ಹಾರೈಸಿದರು. ಜಿಲ್ಲೆಯಾದ್ಯಂತ ನಿಮಾ ಸದಸ್ಯರು, ಔಷಧ ವ್ಯಾಪಾರಿಗಳು ಮತ್ತು ಪರಿಸರ ಪ್ರಿಯರು ಈ ಚಾರಣದಲ್ಲಿ ಭಾಗವಹಿಸಿ ಚೋಮನ ಕುಂದ್ನ ಸುಂದರ ಸೂರ್ಯಾಸ್ತದ ಸೊಬಗನ್ನು ಕಣ್ತುಂಬಿಕೊAಡರು.