ಕರಿಕೆ, ಮಾ. ೧: ಕೊಡಗಿನ ೩ ವನ್ಯಧಾಮಗಳಲ್ಲಿ ಪುಷ್ಪಗಿರಿ ವನ್ಯಧಾಮ ತುಂಬಾ ಪ್ರಸಿದ್ಧತೆ ಪಡೆದ ವನ್ಯಧಾಮ. ಕಾರಣ ಮುಗಿಲುಪೇಟೆ ಖ್ಯಾತಿಯ ಮಾಂದಲ್ ಪಟ್ಟಿ ಪ್ರಕೃತಿ ಸೌಂದರ್ಯದ ವೀಕ್ಷಣಾ ಗೋಪುರ ಸೇರಿದಂತೆ ಇಲ್ಲಿ ಎರಡು ಚಾರಣ ಪ್ರದೇಶಗಳಿದ್ದು, ವಾರ್ಷಿಕವಾಗಿ ಸುಮಾರು ೫೦ ರಿಂದ ೬೦ ಲಕ್ಷದಷ್ಟು ಆದಾಯ ಸರ್ಕಾರಕ್ಕೆ ಪ್ರವಾ ಸೋದ್ಯಮದಿಂದ ಬರುತ್ತಿದ್ದು, ಆದರೆ ಇಲ್ಲಿ ಖಾಯಂ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ.
ಹಾಲಿ ಎರಡು ಅರಣ್ಯ ರಕ್ಷಕರು ಒಬ್ಬರು ಉಪ ವಲಯ ಅರಣ್ಯಾಧಿ ಕಾರಿ ಮಾತ್ರ ಕಾರ್ಯ ನಿರ್ವಹಿ ಸುತ್ತಿದ್ದು, ಇವರು ಒಟ್ಟಾರೆ ೨೭೦೦೦ ಸಾವಿರ ಎಕರೆ ಅರಣ್ಯ ಭೂಮಿಯನ್ನು ಕಾಯಬೇಕು. ಇದು ಪುಷ್ಪಗಿರಿ ವನ್ಯಜೀವಿ ವಲಯಕ್ಕೆ ಸೇರಿದ್ದು ಇಲ್ಲಿ ೧ ವಲಯ ಅರಣ್ಯಾಧಿಕಾರಿ ಹುದ್ದೆ, ೩ ಉಪ ವಲಯ ಅರಣ್ಯಾಧಿಕಾರಿ ಹುದ್ದೆ, ೧೦ ಅರಣ್ಯ ರಕ್ಷಕ ಹುದ್ದೆ ಮತ್ತು ೨ ಅರಣ್ಯ ವೀಕ್ಷಕ ಹುದ್ದೆ ಇದ್ದು, ಕೇವಲ ಒಂದು ಉಪ ವಲಯ ಅರಣ್ಯಾಧಿಕಾರಿ ಹುದ್ದೆ ಮತ್ತು ೨ ಅರಣ್ಯ ರಕ್ಷಕ ಹುದ್ದೆ ಹಾಗೂ ವಲಯ ಅರಣ್ಯಾಧಿಕಾರಿ ಹುದ್ದೆ ಮಾತ್ರ ಭರ್ತಿ ಆಗಿದ್ದು, ಒಬ್ಬ ಉಪ ವಲಯ ಅರಣ್ಯಾಧಿಕಾರಿ ಎರಡು ಶಾಖೆ ಮತ್ತು ಒಂದು ಐಸಿಟಿ ಕಾರ್ಯ ನಿರ್ವ ಹಿಸುತ್ತಿದ್ದಾರೆ. ಎರಡು ಅರಣ್ಯ ರಕ್ಷಕರು ತಲಾ ನಾಲ್ಕು ಗಸ್ತುಗಳ ಮತ್ತು ನ್ಯಾಯಾಂಗ ಕೆಲಸದ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅರಣ್ಯ ವೀಕ್ಷಕ ಹುದ್ದೆ ಸಂಪೂರ್ಣ ಖಾಲಿ ಇದ್ದು ಯಾರು ಕೇಳುವವರಿಲ್ಲ.
ಪುಷ್ಪಗಿರಿ ವನ್ಯಧಾಮದಲ್ಲಿ ಬಹುಮುಖ್ಯ ಸಮಸ್ಯೆ ಎಂದರೆ ಹರಳು ಕಲ್ಲು ನಿಕ್ಷೇಪ ಇರುವ ಕೂಜಿಮಲೆ ಗಸ್ತು ಇಲ್ಲಿ ಖಾಯಂ ಸಿಬ್ಬಂದಿಗಳು ಇದ್ದರೂ ಅವರಿಗೆ ಹೆಚ್ಚಿನ ಗಸ್ತುಗಳ ಪ್ರಬಾರ ಒತ್ತಡ ವಾಗಿದೆ. ವನ್ಯಧಾಮದ ಗಡಿಗಳು ಶೋಲಾ ಹುಲ್ಲುಗಾವಲು ಪ್ರದೇಶದಿಂದ ಕೂಡಿದ್ದು ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚು ತಡೆಗೆ ತುಂಬಾ ತೊಂದರೆಯಾಗುತ್ತಿದೆ. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಜಾಸ್ತಿ ಆಗಿದೆ ಎಂದು ದಿನಗೂಲಿ ನೌಕರರು ದೂರಿದ್ದಾರೆ. ಅಲ್ಲದೆ ಮಾಂದಲ್ ಪಟ್ಟಿಯ ಪ್ರಕೃತಿ ಶಿಬಿರ ಮತ್ತು ಪುಷ್ಪಗಿರಿ ಪರ್ವತಕ್ಕೆ ಚಾರಣ ಬರುವವರನ್ನು ಪರಿಶೀಲನೆ ಮಾಡಲು ಕಷ್ಟವಾಗುತ್ತದೆ. ಬರುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಕಷ್ಟವಾಗುತ್ತದೆ.
ರಜೆಯನ್ನು ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಗಮನ ಹರಿಸಿದಂತಿಲ್ಲ. ಅರಣ್ಯ ರಕ್ಷಕ ಹುದ್ದೆಗೆ ಬಡ್ತಿ ನೀಡುವ ಸಂದರ್ಭದಲ್ಲಿ ಈ ಹುದ್ದೆಗೆ ನೇಮಕ ಮಾಡಲು ಕ್ರಮ ವಹಿಸಬಹುದಿತ್ತು. ಆದರೆ ಮಾಡಿಲ್ಲ. ಕೆಲವು ವಲಯಗಳಲ್ಲಿ ರಕ್ಷಣಾ ಕಾರ್ಯ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಇಲ್ಲಿ ಕರ್ತವ್ಯಕ್ಕೆ ನಿಯೋಜಿಸಿ ಮುಂದಿನ ನೇಮಕಾತಿ ಅಥವಾ ಮುಂಬಡ್ತಿ ಸಂದರ್ಭದಲ್ಲಿ ಇಲ್ಲಿಗೆ ಮೊದಲ ಆದ್ಯತೆ ನೀಡಿ ಪರಿಸರ ಹಾಗೂ ವನ್ಯಜೀವಿಗಳ ಸಂತತಿ ಉಳಿಸಿ ಪರಿಸರ ಸಮತೋಲನ ಕಾಪಾಡು ವಂತಾಗಲಿ ಎಂಬುದು ಪರಿಸರ ಪ್ರೇಮಿಗಳ ಆಶಯ.
-ಸುಧೀರ್ ಹೊದ್ದೆಟ್ಟಿ