ಸೋಮವಾರಪೇಟೆ, ಮಾ. ೧: ಇಲ್ಲಿನ ಲಯನ್ಸ್ ಕ್ಲಬ್ನ ವತಿಯಿಂದ ಚಿಕ್ಕಮಗಳೂರಿನ ಡೆಲ್ಟಾ ಕಣ್ಣಿನ ಕೇಂದ್ರದ ಸಹಯೋಗದಲ್ಲಿ ಸ್ಥಳೀಯ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಕೆ. ರೋಹಿತ್ ಚಾಲನೆ ನೀಡಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಕೆ.ಎನ್. ತೇಜಸ್ವಿ, ಖಜಾಂಚಿ ಜಿ.ಟಿ. ಯೊಗೇಂದ್ರ, ನಿಕಟಪೂರ್ವ ಅಧ್ಯಕ್ಷ ಸಿ.ಕೆ. ಮಲ್ಲಪ್ಪ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಂ. ಚಂದ್ರಾಜು, ಕಾರ್ಯದರ್ಶಿ ವೆಂಕಟೇಶ್, ಎ.ಎಸ್. ಮಹೇಶ್, ಚಿಕ್ಕಮಗಳೂರಿನ ಡೆಲ್ಟಾ ಕಣ್ಣಿನ ಕೇಂದ್ರದ ಪ್ರಮುಖರಾದ ಜ್ಯೋತಿ ಇದ್ದರು.
ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಶಿಬಿರದಲ್ಲಿ ಭಾಗಿಯಾದ ಸಾರ್ವಜನಿಕರ ಕಣ್ಣುಗಳನ್ನು ಉಚಿತವಾಗಿ ತಪಾಸಣೆ ನಡೆಸಿದ ಆಸ್ಪತ್ರೆಯ ವೈದ್ಯರು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.