ಮಡಿಕೇರಿ, ಫೆ. ೨೮: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಕಾಲೇಜಾದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೇಜರ್ ಡಾ. ರಾಘವ ಬಿ., ಡಾ. ತಿಪ್ಪೇಸ್ವಾಮಿ, ಡಾ. ಗಾಯತ್ರಿ ದೇವಿ, ಡಾ. ನಾಗರಾಜ್ ಕೆ.ಪಿ. ಮತ್ತು ಡಾ. ಎಂ.ಪಿ. ಕೃಷ್ಣ ಇವರುಗಳನ್ನು ಪ್ರಾಧ್ಯಾಪಕರುಗಳಾಗಿ ಆಯ್ಕೆ ಮಾಡಲಾಗಿದೆ. ಇಲ್ಲಿಯ ತನಕ ವಿಶ್ವವಿದ್ಯಾನಿಲಯಗಳ ಬೋಧಕ ವರ್ಗದವರಿಗೆ ಮಾತ್ರ ಪ್ರಾಧ್ಯಾಪಕರ ಹುದ್ದೆಯನ್ನು ನೀಡುವ ಪದ್ಧತಿ ಇದ್ದು, ಇತ್ತೀಚೆಗೆ ಯುಜಿಸಿ ನಿಯಮಗಳಂತೆ ಕಾಲೇಜಿಗೆ ಪ್ರಾಧ್ಯಾಪಕರನ್ನು ನೇಮಕ ಮಾಡಲಾಗುತ್ತಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಾಧ್ಯಾಪಕರ ನೇಮಕ ಮಾಡಲಾಗಿದೆ.