*ಗೋಣಿಕೊಪ್ಪ, ಫೆ. ೨೮: ಗೋಣಿಕೊಪ್ಪ ‘ಶಿವಾಜಿ ಯುವ ಸೇನೆ’ ಶಿವಾಜಿ ಮಹಾರಾಜ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಮೈಸೂರಮ್ಮ ಅರುವತ್ತೊಕ್ಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಶಿವಾಜಿ ಮಹಾರಾಜರ ಜನ್ಮ ದಿನದ ಬಗೆ ತಿಳಿಸಲಾಯಿತು. ನಂತರ ಮಕ್ಕಳಿಗೆ ಸಿಹಿ ಹಂಚಲಾಯಿತು.
ಶಿವಾಜಿ ಸೇನೆಯು ಸಮಾಜಕ್ಕೆ ಸ್ವಂದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸಮಾಜದಲ್ಲಿ ಉತ್ತಮ ಬೆಳವಣಿಗೆ ಕಂಡುಕೊಳ್ಳುವ ಮತ್ತು ಯುವ ಸಮುದಾಯದಲ್ಲಿ ಹಿಂದೂ ಸಾಮ್ರಾಟ್ ಶಿವಾಜಿ ಮಹಾರಾಜ್ ಅವರ ಬಗ್ಗೆ ತಿಳಿಸುವ ಉದ್ದೇಶ ಹೊಂದಿದೆ ಎಂದು ಗೋಣಿಕೊಪ್ಪ ಶಿವಾಜಿ ಯುವ ಸೇನೆಯ ಅಧ್ಯಕ್ಷ ಅಣ್ಣಪ್ಪ ಹೇಳಿದರು.
ಅರುವತ್ತೊಕ್ಲು ಗ್ರಾ.ಪಂ. ಸದಸ್ಯ ನವೀನ್, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಕಾರ್ಯದರ್ಶಿ ಸುರೇಶ್, ಸಿಂಗಿ ಸತೀಶ್ ಸಂಘದ ಸದಸ್ಯರುಗಳಾದ ಸ್ವಾಮಿ, ದೀಪು, ಅಕ್ಷಯ್, ರಾಜೇಶ್ ಮೇಲ್ವಿಚಾರಕಿ ಮೇರಿನ, ಯಶಸ್ವಿನಿ ಮತ್ತು ಮಕ್ಕಳ ಪೋಷಕರು ಇದ್ದರು.