ಸಿದ್ದಾಪುರ, ಫೆ, ೨೮: ಓಡಿಪಿ ಸಂಸ್ಥೆ ಮೈಸೂರು ಹಾಗೂ ನಬಾರ್ಡ್ ಬೆಂಗ ಳೂರು ಇದರ ಸಹಯೋಗದೊಂದಿಗೆ ಮಹಿಳೆಯರಿಗಾಗಿ ಆಯೋಜಿಸಿದ್ದ ಉದ್ಯಮಶೀಲತೆ ಅಭಿವೃದ್ದಿ ಕಾರ್ಯ ಕ್ರಮದಲ್ಲಿ ಟೈಲರಿಂಗ್ ತರಬೇತಿ ಪಡೆದ ಮೂವತ್ತು ಶಿಬಿರಾರ್ಥಿಗಳಿಗೆ ನಬಾರ್ಡ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿ. ರಮೇಶ್ ಬಾಬು ಪ್ರಮಾಣ ಪತ್ರ ವಿತರಿಸಿದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕವೂ ಮಹಿಳೆ ಯರು ತಾವು ತಯಾರು ಮಾಡಿದ ವಸ್ತುಗಳ ಮಾರಾಟ ಮಾಡಲಾಗುತ್ತಿದ್ದು, ಅದರ ಸದುಪಯೋಗವನ್ನೂ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನೆಲ್ಲಿಹುದಿಕೇರಿ ಶಾಖೆ ವ್ಯವಸ್ಥಾಪಕ ಗೌತಮ್ ಮಾತನಾಡಿ, ನಬಾರ್ಡ್ ಸಹಯೋಗದೊಂದಿಗೆ ಬ್ಯಾಂಕಿನಲ್ಲಿ ೫೦ ಸಾವಿರದಿಂದ ಐದು ಲಕ್ಷದವರೆಗೆ ಸಾಲ ಸೌಲಭ್ಯ ನೀಡುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.

ಓಡಿಪಿ ಸಂಸ್ಥೆಯ ಮೈಸೂರು ಯೋಜನಾ ಸಂಯೋಜಕಿ ಮೋಳಿ ಮಾತನಾಡಿ, ಮೂವತ್ತು ಶಿಬಿರಾರ್ಥಿಗಳು ಸೇರಿ ಹತ್ತು ಜನರ ಮೂರು ತಂಡ ರಚಿಸಿ ಅದರ ಮೂಲಕ ತಾವು ಹೊಲಿದ ಬಟ್ಟೆಗಳನ್ನು ಮಾರಾಟ ಮಾಡಲು ಮತ್ತು ಆರ್ಥಿಕ ಸವಲತ್ತುಗಳನ್ನು ಪಡೆಯಲು ಶ್ರಮಿಸ ಬೇಕೆಂದರು.

ಓಡಿಪಿ ಸಂಸ್ಥೆಯ ಯೋಜನಾ ಸಂಯೋಜಕಿ ಲಲಿತಾ ಮಾತನಾಡಿ, ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಶಿಬಿರಾರ್ಥಿಗಳಾದ ಸ್ವಾತಿ ಮತ್ತು ತನ್ಸೀರಾ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಕಾರ್ಯಕ್ರಮದಲ್ಲಿ ಓಡಿಪಿ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮಿನೇಜಸ್, ನೆಲ್ಲಿಹುದಿಕೇರಿ ಗ್ರಾ.ಪಂ. ಸದಸ್ಯೆ ಬಿಂದು, ಪತ್ರಕರ್ತ ಎಂ.ಎ. ಅಜೀಜ್, ಓಡಿಪಿ ನೆಲ್ಲಿಹುದಿಕೇರಿ ಯೂನಿಟ್ ಮೇಲ್ವಿಚಾರಕ ಚೇತಕ್, ತರಬೇತಿ ಶಿಕ್ಷಕಿ ರಾಧಾ ಮತ್ತು ಇತರರಿದ್ದರು.