ಕೂಡಿಗೆ, ಫೆ. ೨೮: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಶೇ. ೫ರ ಅನುದಾನ ವಾಗಿ ವಿಶೇಷಚೇತನರಿಗೆ ವೈದ್ಯಕೀಯ ಸೌಲಭ್ಯಕ್ಕಾಗಿ ೫,೦೦೦ ರೂ.ಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ರಾಜಯ್ಯ ಅವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜೆ. ಗೀತಾ, ಉಪಾಧ್ಯಕ್ಷ ಎನ್.ಎನ್. ಧರ್ಮಪ್ಪ, ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಆರ್. ಹೇಮಲತಾ, ಕಾರ್ಯದರ್ಶಿ ಕೆ.ಸಿ. ರವಿ ಹಾಜರಿದ್ದರು.