ವೀರಾಜಪೇಟೆ, ಫೆ. ೨೮: ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಎಲ್ಲಾ ಸದಸ್ಯರುಗಳು, ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರುಗಳ ಮತ್ತು ಹಾಲಿ ನಿರ್ದೇಶಕರುಗಳು ಮತ್ತು ಸಿಬ್ಬಂದಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬ್ಯಾಂಕ್ ನೂರು ವರ್ಷಗಳನ್ನು ಪೂರೈಸಿದೆ. ಮಾರ್ಚ್ ೬ ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ಶತಮಾನೋತ್ಸವವನ್ನು ಆಚರಿಸಲಾಗುವುದು ಎಂದು ಬ್ಯಾಂಕ್‌ನ ಅಧ್ಯಕ್ಷ ಕರ್ನಂಡ ಸೋಮಯ್ಯ ಹೇಳಿದರು.

ಬ್ಯಾಂಕ್‌ನ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಬಿ.ಐ.ನ ನಿಯಮದಡಿಯಲ್ಲಿ ಕಾಂiÀið ನಿರ್ವಹಿಸುತ್ತಿರುವ ಬ್ಯಾಂಕ್‌ನಲ್ಲಿ ಒಟ್ಟು ೩೮೦೪ ಸದಸ್ಯರಿದ್ದಾರೆ. ೨.೧೮ ಕೋಟಿ ಪಾಲು ಬಂಡವಾಳ ಇದೆ. ಬ್ಯಾಂಕಿನ ಒಟ್ಟು ಠೇವಣೆ ರೂ. ೫೬.೨೯ ಕೋಟಿ ಇರುತ್ತದೆ. ವರದಿ ಸಾಲಿನಲ್ಲಿ ೨೩.೬೨ ಕೋಟಿ ಸಾಲ ವಿತರಿಸಲಾಗಿದೆ. ೨೦.೮೨ ಕೋಟಿ ಸಾಲ ವಸೂಲಿ ಮಾಡಲಾಗಿದೆ. ವರ್ಷಾಂತ್ಯಕ್ಕೆ ೨೮.೩೮ ಕೋಟಿ ಬಾಕಿ ಇದ್ದು ಶೇ ೯೦.೦೯ ರಷ್ಟು ಸಾಲ ವಸೂಲಾತಿ ಆಗಿದೆ. ವರದಿ ಸಾಲಿನಲ್ಲಿ ಒಟ್ಟು ೬೩.೮೫ ಲಕ್ಷ ರೂ.ಗಳೂ ಲಾಭ ಗಳಿಸಿದೆ. ಲೆಕ್ಕ ಪರಿಶೋಧನೆಯಲ್ಲಿ ಎ ವರ್ಗ ನೀಡಲಾಗಿದೆ.

ಮಾಜಿ ಅಧ್ಯಕ್ಷ ಹಾಗೂ ನಿದೇರ್ಶಕ ಕೋಲತಂಡ ಬೋಪಯ್ಯ ಮಾತನಾಡಿ ೧೦.೦೨.೧೯೨೨ರಲ್ಲಿ ಪಿ.ಎಫ್ ಪಿಂಟೋ ಪ್ರಥಮವಾಗಿ ಸಹಕಾರ ಸಂಘವನ್ನು ಪ್ರಾರಂಭಿಸಿದರು. ತದನಂತರದಲ್ಲಿ ಸದಸ್ಯರ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕಾಗಿ ಪರಿವರ್ತನೆ ಮಾಡಲಾಯಿತು ಎಂದು ತಿಳಿಸಿದರು. ಮಾರ್ಚ್ ೬ ರಂದು ಪೂರ್ವಹ್ನ ೧೦ ಗಂಟೆಗೆ ಬ್ಯಾಂಕ್‌ನ ನವೀಕರಣ ಕೋಣೆಯನ್ನು ಉದ್ಘಾಟಿಸಲಾಗುವುದು. ೧೦.೩೦ ಗಂಟೆಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ಸಭೆ ನಡೆಯಲಿದೆ ಎಂದು ಹೇಳಿದರು.

ನಿರ್ದೇಶಕ ಮಾದೇಯಂಡ ಸಂಪಿಪೂಣಚ್ಚ ಮಾತನಾಡಿ ಬ್ಯಾಂಕ್‌ನ ಅಧ್ಯಕ್ಷರಾದ ಕರ್ನಂಡ ಸೋಮಯ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ಯಾಂಕ್‌ನ ನವೀಕೃತ ಕೋಣೆಯನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ವೀರಾಜಪೇಟೆ ಶಾಸಕ ಸರಕಾರಿ ಜಮೀನುಗಳ ಸಂರಕ್ಷಣ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದಾರೆ.

ವಿಧಾನಪರಿಷತ್ ಸದಸ್ಯ ಮಂಡೇಪಡ ಸುಜಾ ಕುಶಾಲಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಸಹಕಾರ ಸಂಘಗಳ ಉಪ ನಿಬಂಧಕ ಎಂ.ಎಸ್. ಕೃಷ್ಣ ಪ್ರಸಾದ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಇ. ಮೋಹನ್, ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೋಹನ್, ಉಪಸ್ಥಿತಲಿರುವರು. ಇದೇ ಸಂದರ್ಭದಲ್ಲಿ ಹಾಲಿ ಅಧ್ಯಕ್ಷ ಕರ್ನಂಡ ಸೋಮಯ್ಯ ಮಾಜಿ ಅಧ್ಯಕ್ಷರುಗಳಾದ ಮೇರಿಯಂಡ ಪೂವಯ್ಯ, ಕೋಲತಂಡ ಬೋಪಯ್ಯ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಎಂ. ಚರ್ಮಣ, ನಿರ್ದೇಶಕರುಗಳಾದ ಎಂ.ಎA. ನಂಜಪ್ಪ, ಎ.ಪಿ. ಪ್ರಸನ್ನ, ಕೆ.ಬಿ. ಪ್ರತಾಪ್, ಪಿ.ಎಂ. ರಚನ್, ಎಂ.ಪಿ. ಕಾವೇರಪ್ಪ, ವಿ.ಪಿ. ರಮೇಶ್, ಎಂ.ಕೆ. ದೇವಯ್ಯ, ಪಿ.ಕೆ. ಅಬ್ದುಲ್ ರೆಹಮಾನ್, ಹೆಚ್.ಸಿ. ಮುತ್ತಮ್ಮ, ಎಸ್.ಬಿ. ಜುಬಿನಾ, ಐ.ಎಂ. ಕಾವೇರಮ್ಮ ವ್ಯವಸ್ಥಾಪಕ ಸಿ.ಕೆ. ಪೂವಯ್ಯ ಉಪಸ್ಥಿತರಿದ್ದರು.