ಮಡಿಕೇರಿ, ಫೆ. ೨೮: ಸ್ನೇಹಾಶ್ರಯ ಸಮಿತಿ (ಓ.ಡಿ.ಪಿ.) ಮೂಲಕ ಮಡಿಕೇರಿಯ ಓ.ಡಿ.ಪಿ. ಕಚೇರಿಯಲ್ಲಿ ೨೫ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓ.ಡಿ.ಪಿ. ನಿರ್ದೇಶಕ ಆಲೆಕ್ಸ್ ಪ್ರಶಾಂತ್ ಸಿಕ್ವೆರ ಅವರು ವಹಿಸಿ ಮಾತನಾಡಿ, ಸ್ನೇಹಾಶ್ರಯ ಸಮಿತಿ ಮೂಲಕ ದಾನಿಗಳಿಂದ ಸಹಾಯ ಪಡೆದು ೧೪ ವರ್ಷಗಳಿಂದ ಸೇವೆ ಮಾಡುತ್ತಾ ಬರುತ್ತಿದ್ದೇವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಪೋಷಕರು ಮಕ್ಕಳ ಆರೋಗ್ಯದೆಡೆಗೆÀ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು.
ಪೋಷಕರು ಸರಕಾರದಿಂದ ಉಚಿತವಾಗಿ ದೊರಕುವ ಸ್ವಉದ್ಯೋಗ ತರಬೇತಿಯನ್ನು ಪಡೆದು ಆರ್ಥಿಕವಾಗಿ ಮುಂದೆ ಬರಬೇಕೆಂದು ಕರೆ ನೀಡಿದರು.
ಸ್ನೇಹಾಶ್ರಯ ಸಮಿತಿ ಕಾರ್ಯಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು, ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಕನ್ನಂಡ ಕವಿತಾ, ವಕೀಲೆ ನಳಿನಿ ಪೊನ್ನಪ್ಪ, ಮೈಸೂರು ಓ.ಡಿ.ಪಿ. ಸಂಯೋಜಕಿ ಮೋಲಿ, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕದ ಮೇಲ್ವಿಚಾರಕಿ ಸುನಿತಾ, ಓ.ಡಿ.ಪಿ. ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮೆನೆಜಸ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಕ್ಷತಾ ಅವರು ಸ್ವಾಗತಿಸಿದರು. ಓ.ಡಿ.ಪಿ. ಕಾರ್ಯಕರ್ತೆ ವಿಜಯ ನಾರಾಯಣ ವಂದಿಸಿದರು.