ವೀರಾಜಪೇಟೆ, ಫೆ. ೨೮: ನಬಾರ್ಡ್ ಸಂಸ್ಥೆಯ ಸಹಯೋಗ ದಲ್ಲಿ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಅಮ್ಮತ್ತಿ ಒಂಟಿಯAಗಡಿ, ಇದರ ಸಭಾಂಗಣ ದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ಹಾಗೂ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ,. ಸಂಸ್ಥೆಯಿAದ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ವೆಲ್ ಬೀಇಂಗ್ (ಜigiಣಚಿಟ ತಿeಟ-beiಟಿg) ಕಾರ್ಯಾಗಾರ ನಡೆಯಿತು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಮ್ಮತ್ತಿ ಶಾಖಾ ವ್ಯವಸ್ಥಾಪಕಿ ಲೌಲಿ ಕಾರ್ಯಾಗಾರದಲ್ಲಿ ಮಾತನಾಡಿ ಜನರಲ್ಲಿ ಉಳಿತಾಯ ಮನೋಭಾವನೆ ಮೂಡಿಸಿಕೊಳ್ಳುವ ಬಗ್ಗೆ ಪ್ರೇರೇಪಿಸಿದರು. ಸಣ್ಣ ಪ್ರಮಾಣದ ಉದ್ದಿಮೆ ಹೈನುಗಾರಿಕೆ ಇತ್ಯಾದಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಲಾಭದಾಯಕ ವ್ಯವಹಾರದತ್ತ ಸ್ವ-ಸಹಾಯ ಗುಂಪುಗಳನ್ನು ಸದೃಢಗೊಳಿಸುವಂತೆ ಸಲಹೆ ನೀಡಿದರು, ಸಹಕಾರ ಸಂಘಗಳ ಮೇಲ್ವಿಚಾರಕರು ಮತ್ತು ವ್ಯವಸ್ಥಾಪಕರಾದ ಶ್ರೀನಿವಾಸ್ ಕೆ.ಜಿ. ಅವರು ಡಿಜಿಟಲ್ ಬ್ಯಾಂಕಿAಗ್ ಬಗ್ಗೆ ಹಾಗೂ ಬ್ಯಾಂಕಿAಗ್ ವ್ಯವಸ್ಥೆಯಲ್ಲಿ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕಿAಗ್ ವ್ಯವಹಾರಗಳಲ್ಲಿ ತಂತ್ರಜ್ಞಾನ ಬಳಕೆ ಬಗ್ಗೆ ಮತ್ತು ಮೊಬೈಲ್ ಆಪ್ ಬಳಕೆ ಬಗ್ಗೆ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಿಬ್ಬಂದಿ ಆಯುಬ್ ಸದೃಢ ಸ್ವ-ಸಹಾಯ ಗುಂಪೊAದರ ಗುಣ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಸ್ವಸಹಾಯ ಗುಂಪುಗಳಿಗೆ ನೀಡಲಾಗುತ್ತಿರುವ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಜೀವಿನಿ ಒಕ್ಕೂಟದ ರಚನೆ, ಕಾರ್ಯವೈಖರಿ ಬಗ್ಗೆ ಬಿ.ಎಸ್. ರೇಖಾ ಮಾಹಿತಿ ನೀಡಿದರು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾತಂಡ ಡಿ ಭೀಮಯ್ಯ ಸ್ವಾಗತಿಸಿದರು, ನಿರ್ದೇಶಕರುಗಳಾದ ಬೊಪ್ಪಂಡ ಪಿ. ಗಣಪತಿ ಮತ್ತು ವಿ.ಆರ್. ಪ್ರಭಾವತಿ ಉಪಸ್ಥಿತರಿದ್ದರು.