ಸಚಿವ ಸ್ಥಾನಕ್ಕೆ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ರಾಜೀನಾಮೆ
ನವದೆಹಲಿ, ಫೆ. ೨೮: ಸಚಿವ ಸ್ಥಾನಕ್ಕೆ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ರಾಜೀನಾಮೆ ನೀಡಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆಗಳನ್ನು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅಬಕಾರಿ ಹಗರಣದಲ್ಲಿ ಬಂಧನಕ್ಕೀಡಾಗಿರುವ ಮನೀಶ್ ಸಿಸೋಡಿಯಾ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿರುವ ಎಎಪಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿದ್ದಾರೆ. ಇದೀಗ ಇಬ್ಬರೂ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಬ್ಬರ ರಾಜೀನಾಮೆಯನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಈ ಇಬ್ಬರು ಸಚಿವರ ರಾಜೀನಾಮೆಗೆ ಬಿಜೆಪಿಯಿಂದ ನಿರಂತರ ಬೇಡಿಕೆ ಇತ್ತು. ಏತನ್ಮಧ್ಯೆ, ದೆಹಲಿ ಸರ್ಕಾರದಲ್ಲಿ ಪುನಾರಚನೆ ನಡೆದಿದ್ದು, ಮಾಹಿತಿ ಪ್ರಕಾರ ಮನೀಶ್ ಸಿಸೋಡಿಯಾ ಅವರ ಇಲಾಖೆಗಳನ್ನು ಕೈಲಾಶ್ ಗೆಹ್ಲೋಟ್ ಮತ್ತು ರಾಜ್ ಕುಮಾರ್ ಆನಂದ್ ಅವರಿಗೆ ನೀಡುವ ಸಾಧ್ಯತೆ ಇದೆ. ಸಿಸೋಡಿಯಾ ಅವರು ೧೮ ಸಚಿವಾಲಯಗಳ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದರು. ಎಎಪಿ ಪಕ್ಷದಲ್ಲಿ ಸಿಸೋಡಿಯಾ ಕೇಜ್ರಿವಾಲ್ ಬಳಿಕ ಎರಡನೇ ಹಂತದ ಪ್ರಮುಖ ನಾಯಕರಾಗಿದ್ದು, ಸಚಿವ ಸತ್ಯೇಂದ್ರ ಜೈನ್ ಈಗಾಗಲೇ ಜೈಲಿನಲ್ಲಿದ್ದು, ಅಂದಿನಿAದ ಸತ್ಯೇಂದ್ರ ಜೈನ್ ಅವರ ಇಲಾಖೆಗಳ ಕೆಲಸವನ್ನೂ ಸಿಸೋಡಿಯಾ ನಿರ್ವಹಿಸುತ್ತಿದ್ದರು. ಇದೀಗ ಅವರ ಬಂಧನದ ಹಿನ್ನೆಲೆ ಮತ್ತು ಹಾಲಿ ಬೆಳವಣಿಗೆಗಳಿಂದ ರಾಜ್ಯದಲ್ಲಿ ಆಡಳಿತಾರೂಢ ಪಕ್ಷ ಮುಜುಗರಕ್ಕೀಡಾಗಿದೆ.
೩ನೇ ತ್ರೆöÊಮಾಸಿಕ ನಿಧಾನಗತಿಯಲ್ಲಿ ಜಿಡಿಪಿ
ನವದೆಹಲಿ, ಫೆ. ೨೮: ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ೩ನೇ ತ್ರೆöÊಮಾಸಿಕ ಅವಧಿಯ ಜಿಡಿಪಿ ಡಾಟಾ ಬಿಡುಗಡೆ ಆಗಿದ್ದು, ಶೇ. ೪.೪ರ ದರಕ್ಕೆ ಆರ್ಥಿಕತೆ ಸೀಮಿತವಾಗಿದೆ ಎನ್ನಲಾಗಿದೆ. ಹಿಂದಿನ ವರ್ಷ ಶೇ. ೧೧.೨ರಷ್ಟು ಬೆಳವಣಿಗೆ ಸಾಧಿಸಿದ್ದ ಭಾರತದ ಆರ್ಥಿಕತೆ ೩ನೇ ತ್ರೆöÊಮಾಸಿಕ ಅವಧಿಯಲ್ಲಿ ಕೇವಲ ಶೇ. ೪.೪ರಷ್ಟು ಮಾತ್ರ ಪ್ರಗತಿ ಹೊಂದಿದೆ. ರಾಷ್ಟಿçÃಯ ಅಂಕಿ-ಅAಶ ಕಚೇರಿ ಇಂದು ೩ನೇ ತ್ರೆöÊಮಾಸಿಕ ಅವಧಿಯ ಜಿಡಿಪಿ ವಿವರಗಳಿರುವ ವರದಿಯನ್ನು ಬಿಡುಗಡೆ ಮಾಡಿದೆ. ಹಿಂದಿನ ಕ್ವಾರ್ಟರ್ನಲ್ಲಿ, ಅಂದರೆ ೨೦೨೨ ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ರೆöÊಮಾಸಿಕದಲ್ಲಿ ಶೇ. ೬.೩ ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿತ್ತು. ಮೂರನೇ ತ್ರೆöÊಮಾಸಿಕದಲ್ಲಿ ಬೆಳವಣಿಗೆ ಮಂದಗೊAಡಿದ್ದರೂ ೨೦೨೨-೨೩ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. ೭ರಷ್ಟು ಬೆಳೆಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ್ದ ವರದಿಗಿಂತ ಹಾಲಿ ವರದಿ ಭಿನ್ನ ವಾಗಿದ್ದು, ೨೦೨೨-೨೩ರ ಹಣಕಾಸು ವರ್ಷದಲ್ಲಿ ಶೇ. ೭ರಷ್ಟು ಜಿಡಿಪಿ ಬೆಳೆಯಬಹುದು ಎಂದು ಹಿಂದೆ ಅಂದಾಜು ಮಾಡಿದ್ದ ಆರ್ಬಿಐ ಡಿಸೆಂಬರ್ ತಿಂಗಳಲ್ಲಿ ತನ್ನ ಅಂದಾಜನ್ನು ಶೇ. ೬.೮ಕ್ಕೆ ಇಳಿಸಿತ್ತು. ಐಎಂಫ್, ಎಡಿಬಿ ಸಂಸ್ಥೆಗಳೂ ಕೂಡ ಭಾರತದ ಆರ್ಥಿಕತೆ ಶೇ. ೬.೮ರ ದರದಲ್ಲಿ ಬೆಳೆಯಬಹುದು ಎಂದು ಅಂದಾಜು ಮಾಡಿದ್ದವು. ಆದರೆ ಹಾಲಿ ಜಿಡಿಪಿ ದರ ಶೇ೪.೪ ಸೀಮಿತವಾಗಿದೆ. ಗಮನಾರ್ಹ ಸಂಗತಿ ಎಂದರೆ ಸರ್ಕಾರದ ವಿತ್ತೀಯ ಕೊರತೆ ಅಗಾಧ ಇದೆ. ಉದ್ದೇಶಿತ ಗುರಿಗೆ ಹೋಲಿಸಿದರೆ ವಿತ್ತೀಯ ಕೊರತೆ ಶೇ. ೬೭.೮ರಷ್ಟಿದೆ. ಕಡಿಮೆ ಆದಾಯ, ಹೆಚ್ಚು ವೆಚ್ಚ ಇದಕ್ಕೆ ಕಾರಣ. ೨೦೨೨ರ ಏಪ್ರಿಲ್ನಿಂದ ೨೦೨೩ ಜನವರಿ ಅವಧಿಯಲ್ಲಿ ವೆಚ್ಚ ಮತ್ತು ಆದಾಯದ ನಡುವಿನ ಅಂತರವಾದ ವಿತ್ತೀಯ ಕೊರತೆ ಬರೋಬ್ಬರಿ ರೂ. ೧೧.೯ ಲಕ್ಷ ಕೋಟಿ ಎಂದು ದತ್ತಾಂಶಗಳಿAದ ತಿಳಿದುಬರುತ್ತದೆ.
ಭಾರತವನ್ನು ಜಾಗತಿಕ ಆಟೋಮೊಬೈಲ್ ಹಬ್ ಮಾಡಲು ಕ್ರಮ
ನವದೆಹಲಿ, ಫೆ. ೨೮: ಭಾರತವನ್ನು ಜಾಗತಿಕ ಆಟೋಮೊಬೈಲ್ ತಯಾರಿಕಾ ಹಬ್ ಮಾಡಲು ಕೇಂದ್ರ ಸರ್ಕಾರ ಶ್ರಮವಹಿಸುತ್ತಿದೆ ಎಂದು ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಸ್ಥಾಪಿಸಲಾಗಿರುವ ಟಾಟಾ ಮೋಟರ್ಸ್ನ ವಾಹನಗಳ ಗುಜರಿ ಘಟಕಕ್ಕೆ ಆನ್ಲೈನ್ ಮೂಲಕ ಚಾಲನೆ ನೀಡಿದ ಅವರು, ಸದ್ಯ ಭಾರತದ ಜಿಡಿಪಿಗೆ ಆಟೋಮೊಬೈಲ್ ಉದ್ಯಮದಿಂದ ಶೇ. ೭.೧ ರಷ್ಟು ಕೊಡುಗೆ ನೀಡಲಾಗುತ್ತಿದೆ. ಈ ಕ್ಷೇತ್ರದ ಗಾತ್ರ ೭.೮ ಲಕ್ಷ ಕೋಟಿ ರೂನಷ್ಟಿದ್ದು, ಅದನ್ನು ಮುಂಬರುವ ವರ್ಷಗಳಲ್ಲಿ ೧೫ ಲಕ್ಷ ಕೋಟಿ ರೂಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು. ಪ್ರಸ್ತುತ ಆಟೋ ಮೊಬೈಲ್ ಕ್ಷೇತ್ರವು ಸುಮಾರು ೭.೮ ಲಕ್ಷ ಕೋಟಿ ಮೌಲ್ಯದ್ದಾಗಿದೆ ಮತ್ತು ಜಿಡಿಪಿಗೆ ಶೇ. ೭.೧ ರಷ್ಟು ಕೊಡುಗೆ ನೀಡುತ್ತದೆ. ಆಟೋಮೊಬೈಲ್ ಕ್ಷೇತ್ರದಿಂದ ದೇಶದಾದ್ಯಂತ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ೪ ಕೋಟಿ ಉದ್ಯೋಗಗಳು ಸಿಕ್ಕಿವೆ. ಇದನ್ನು ೨೦೨೫ರ ವೇಳೆಗೆ ೫ ಕೋಟಿಗೆ ಹೆಚ್ಚಿಸುವ ಸಂಕಲ್ಪ ಕೈಗೊಳ್ಳಲಾಗಿದೆ. ಈ ಮೂಲಕ ಜಗತ್ತಿನಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತವನ್ನು ನಂಬರ್ ೧ ಆಗಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಆಟೋ ವಲಯವು ಸುಮಾರು ೪ ಕೋಟಿ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ ಮತ್ತು ೨೦೨೫ ರ ವೇಳೆಗೆ ಈ ಸಂಖ್ಯೆ ೫ ಕೋಟಿಗೆ ಏರುವ ನಿರೀಕ್ಷೆಯಿದೆ. ಭಾರತವನ್ನು ಜಾಗತಿಕ ಆಟೋಮೊಬೈಲ್ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ೧೫ ಲಕ್ಷ ಕೋಟಿ ರೂ.ಗೆ ಕೊಂಡೊಯ್ಯುವ ಗುರಿ ಇದೆ ಎಂದು ಅವರು ಹೇಳಿದರು. ಭವಿಷ್ಯದಲ್ಲಿ, ಹೆಚ್ಚಿನ ವಾಹನಗಳು ಹೈಡ್ರೋಜನ್ ಮತ್ತು ಹಸಿರು ಇಂಧನದಲ್ಲಿ ಚಲಿಸುತ್ತವೆ, ಹೊಸ ಗುಜರಿ ನೀತಿಯಿಂದ ಹಳೆಯ ಹಾನಿಕಾರಕ ವಾಹನಗಳನ್ನು ವಿಲೇವಾರಿ ಮಾಡುವುದು ಸುಲಭವಾಗಿದೆ. ಈ ಮೂಲಕ ಪರಿಸರ ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸಲಾಗುವುದು ಎಂದು ಸಚಿವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಟಾಟಾ ಮೋಟರ್ಸ್ ಇದೇ ಮೊದಲ ಬಾರಿಗೆ ತನ್ನ ಗುಜರಿ ಘಟಕವನ್ನು ರಾಜಸ್ಥಾನದ ಜೈಪುರದಲ್ಲಿ ಸ್ಥಾಪಿಸಿದೆ. ಈ ಘಟಕದ ಮೂಲಕ ವಾರ್ಷಿಕವಾಗಿ ೧೫,೦೦೦ ವಾಹನಗಳನ್ನು ವಿಲೇವಾರಿ ಮಾಡಬಹುದಾಗಿದೆ. ಇದೇ ವೇಳೆ ಸ್ಕ್ರ್ಯಾಪ್ ನೀತಿಯಿಂದ ವಾಹನ ಬೇಡಿಕೆ ಹೆಚ್ಚಳವಾಗುತ್ತದೆ ಎಂದು ಅಭಿಪ್ರಾಯಪಟ್ಟ ಗಡ್ಕರಿ, ಪ್ರಸ್ತುತ ದೇಶವು ವಾರ್ಷಿಕವಾಗಿ ೮ ಮಿಲಿಯನ್ ಟನ್ ಸ್ಕ್ರ್ಯಾಪ್ ಸ್ಟೀಲ್ ಅನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಹೇಳಿದರು.
ಕಟ್ಟಡದಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿ ಸಾವು
ಬೀದರ್, ಫೆ. ೨೮: ಬೀದರ್ ಜಿಲ್ಲೆಯಲ್ಲಿ ಮಂಗಳವಾರ ೨೨ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಏಳು ಅಂತಸ್ತಿನ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನನ್ನು ಶ್ರೀರಾಮ ಕ್ಯಾಡಗಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಶ್ರೀರಾಮ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬ್ರಿಮ್ಸ್) ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದನು. ಬ್ರಿಮ್ಸ್ ಹಾಸ್ಟೆಲ್ನಲ್ಲಿ ವಾಸವಿದ್ದ ಆತ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶ್ರೀರಾಮ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನವನಾಗಿದ್ದು, ತಂದೆಯ ಮರಣದ ನಂತರ ಅವರು ಖಿನ್ನತೆಗೆ ಒಳಗಾಗಿದ್ದನು. ಹೊಸನಗರ ಪೊಲೀಸರು ಆತನ ಹಾಸ್ಟೆಲ್ ಮೇಟ್ಗಳು, ಸ್ನೇಹಿತರು ಮತ್ತು ಶಿಕ್ಷಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಈ ಸಂಬAಧ ತನಿಖೆ ನಡೆಯುತ್ತಿದೆ.
ಎಲಾನ್ ಮಸ್ಕ್ಗೆ ಮತ್ತೆ ವಿಶ್ವದ ನಂಬರ್ ೧ ಶ್ರೀಮಂತ ಪಟ್ಟ
ನ್ಯೂಯಾರ್ಕ್, ಫೆ. ೨೮: ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ಪ್ರಕಾರ ಎಲಾನ್ ಮಸ್ಕ್ ಮತ್ತೊಮ್ಮೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ದೈನಂದಿನ ಶ್ರೇಯಾಂಕವಾಗಿದೆ. ಪ್ರತಿ ಬಿಲಿಯನೇರ್ನ ಪ್ರೊಫೈಲ್ ಪುಟದಲ್ಲಿ ನಿವ್ವಳ ಮೌಲ್ಯದ ವಿಶ್ಲೇಷಣೆಯಲ್ಲಿ ಮಾಡಲಾದ ಲೆಕ್ಕಾಚಾರಗಳ ಕುರಿತು ವಿವರಗಳನ್ನು ಒದಗಿಸಲಾಗಿದೆ. ಅಂಕಿಅAಶಗಳನ್ನು ನ್ಯೂಯಾರ್ಕ್ನಲ್ಲಿ ಪ್ರತಿ ವಹಿವಾಟು ದಿನದ ಕೊನೆಯಲ್ಲಿ ಆಪ್ ಡೇಟ್ ಮಾಡಲಾಗುತ್ತದೆ. ಡಿಸೆಂಬರ್ ೨೦೨೨ ರಲ್ಲಿ, ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ಲೂಯಿ ವಿಟಾನ್ನ ಸಿಇಓ ಬರ್ನಾರ್ಡ್ ಅರ್ನಾಲ್ಟ್ ಅವರು ಎರಡು ತಿಂಗಳಿಗಿAತ ಹೆಚ್ಚು ಕಾಲ ಎರಡನೇ ಸ್ಥಾನದಲ್ಲಿದ್ದಾಗ ಟ್ವಿಟರ್ ಸಿಇಓ ಅವರನ್ನು ಹಿಂದಿಕ್ಕಿರುವುದಾಗಿ ವರದಿಯಾಗಿತ್ತು. ಮಸ್ಕ್ ಸಂಪತ್ತಿನ ಏರಿಕೆಯು ಟೆಸ್ಲಾ ಸ್ಟಾಕ್ ಬೆಲೆಗಳಲ್ಲಿನ ಇತ್ತೀಚಿನ ಏರಿಕೆಗೆ ಭಾಗಶಃ ಕಾರಣವಾಗಿದೆ. ಕಳೆದ ಒಂದು ತಿಂಗಳಲ್ಲಿ ಅವರ ಸಂಪತ್ತಿನಲ್ಲಿ ಸುಮಾರು ಶೇ. ೨೫ ರಷ್ಟು ಏರಿಕೆಯಾಗಿದೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನ ಪ್ರಕಾರ, ಮಂಗಳವಾರದAದು ಮಸ್ಕ್ ಸಂಪತ್ತಿನ ನಿವ್ವಳ ಮೌಲ್ಯವು ಸುಮಾರು ೧೮೭.೧ ಬಿಲಿಯನ್ ಆಗಿತ್ತು. ಅರ್ನಾಲ್ಟ್ ಅವರದ್ದು ೧೮೫.೩ ಬಿಲಿಯನ್ ಡಾಲರ್ ನಷ್ಟಾಗಿದೆ.