*ಗೋಣಿಕೊಪ್ಪ, ಫೆ. ೨೭: ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಏರ್ಪಡಿಸಲಾಗಿತ್ತು.

ಪ್ರಾಥಮಿಕ ಆರೋಗ್ಯ ಕೇಂದ್ರ ತಿತಿಮತಿ, ಉಪ ಕೇಂದ್ರ ಅತ್ತೂರು ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಈ ವ್ಯಾಪ್ತಿಯಲ್ಲಿನ ಅಂಗನವಾಡಿ ಮಕ್ಕಳು ಭಾಗವಹಿಸಿ ಆರೋಗ್ಯವಂತ ಶಿಶುಗಳು ಎಂದು ಬಹುಮಾನ ಪಡೆದುಕೊಂಡವು. ಸುಮಾರು ೧೫ಕ್ಕೂ ಹೆಚ್ಚು ಮಕ್ಕಳು ಇದ್ದರು. ಗದ್ದೆಮನೆ, ಅತ್ತೂರು, ಸೀಗೆತೋಡು, ಕಾಯಂಬೆಟ್ಟ, ಹರಿಶ್ಚಂದ್ರಪುರ, ೧ ಮತ್ತು ೨ ಕೇಂದ್ರ ದವರು ಭಾಗವಹಿಸಿದ್ದರು. ತಾಲೂಕು ಕ್ಷೇತ್ರ ಆರೋಗ್ಯ ಅಧಿಕಾರಿ ಶಿವಯ್ಯ, ಸಿ.ಹೆಚ್.ಓ. ಪೃಥ್ವಿ ಪಿ.ಹೆಚ್.ಸಿ.ಓ ಶಿವಮ್ಮ, ಹೆಚ್.ಐ.ಓ. ಕೆಂಪೆರಾಜೇಗೌಡ, ಹಾತೂರು ಗ್ರಾ. ಪಂ. ಸದಸ್ಯ ಸುಮಾ, ಸಂಜೀವಿನಿ ಒಕ್ಕೂಟದ ಸದಸ್ಯೆ ವರಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಲತಾ, ಆಶಾ ಕಾರ್ಯಕರ್ತೆಯರು, ಮಕ್ಕಳು ಇದ್ದರು.