ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿದ ಪ್ರಧಾನಿ ಮೋದಿ

ಬೆಳಗಾವಿ, ಫೆ. ೨೭: ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗಳಿಗೆ ೧೩ನೇ ಕಂತಿನ ಹಣವನ್ನು ಜಮೆ ಮಾಡಿದರು. ೮ ಕೋಟಿಗೂ ಅಧಿಕ ರೈತರ ಖಾತೆಗಳಿಗೆ ತಲಾ ೨ ಸಾವಿರದಂತೆ ಒಟ್ಟಾರೆ ರೂ. ೧೬,೮೦೦ ಕೋಟಿ ಹಣವನ್ನು ನೇರವಾಗಿ ವರ್ಗಾವಣೆ ಮಾಡುವ ಮೂಲಕ ಹೋಳಿ ಗಿಫ್ಟ್ ನೀಡಿದರು. ಇದೇ ವೇಳೆ ಜಲ ಜೀವನ್ ಮಿಷನ್ ಯೋಜನೆಯಡಿ ರೂ. ೨,೨೪೦ ಕೋಟಿ ಮೊತ್ತದ ಜಲಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಪ್ರಧಾನಿ, ಬೆಳಗಾವಿಯಿಂದ ದೇಶದ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ೫೦ ಸಾವಿರ ಕೋಟಿಗೂ ಹೆಚ್ಚು ಹಣ ಮಹಿಳೆಯರ ಖಾತೆಗೆ ಹಣ ತಲುಪಿದೆ. ದೇಶದಲ್ಲಿ ಅತಿ ಹೆಚ್ಚು ಸಣ್ಣ ರೈತರಿದ್ದು, ಈ ಯೋಜನೆಯಿಂದ ಅವರಿಗೆ ಅನುಕೂಲವಾಗಲಿದೆ. ಯಾವುದೇ ಭ್ರಷ್ಟಾಚಾರವಿಲ್ಲದೆ ಹಣ ರೈತರ ಕೈ ಸೇರುತ್ತಿದೆ ಮೊಬೈಲ್‌ನಲ್ಲಿ ಮೆಸೇಜ್ ಪರಿಶೀಲಿಸಿ ಎಂದರು. ೨೦೧೪ರ ನಂತರ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಆಗಿದೆ. ಕೃಷಿಯಲ್ಲಿ ಆಧುನಿಕ ಬದಲಾವಣೆ ತರಲಾಗುತ್ತಿದೆ. ಪ್ರಸ್ತುತ ವರ್ಷ ಕೃಷಿಗೆ ಹೆಚ್ಚಿನ ಆಧÀ್ಯತೆ ನೀಡಲಾಗಿದೆ. ಪ್ರಾಕೃತಿಕ ಸಹಜ ಕೃಷಿ ಕಾರ್ಯಕ್ಕೆ ಆಧ್ಯತೆ ನೀಡಲಾಗುತ್ತಿದೆ. ಸಿರಿ ಧಾನ್ಯ ಬೆಳೆಗಳ ಬೆಳವಣಿಗೆಗೆ ಹೆಚ್ಚಿನ ಆದÀ್ಯತೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ರೈಲ್ವೆ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೆಳಗಾವಿ ರೈಲು ನಿಲ್ದಾಣ ಆಶ್ಚರ್ಯ ಮತ್ತು ಅಭಿಮಾನ ಉಂಟು ಮಾಡುವಷ್ಟು ಅಧುನಿಕರಣಗೊಳಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೌರವಿಸುತ್ತೇನೆ. ಆದರೆ, ಕಾಂಗ್ರೆಸ್‌ನÀಲ್ಲಿ ಅವರಿಗೆ ಸೂಕ್ತ ಗೌರವ ದೊರೆಯುತ್ತಿಲ್ಲ. ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ನಿರಾಸೆಯ ಭಾವದಲ್ಲಿ ನರಳುತ್ತಿದೆ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ರೋಡ್ ಶೋ ನಡೆಸಿದರು. ಚೆನ್ನಮ್ಮ ವೃತ್ತದಿಂದ ಮಾಲಿನಿ ಸಿಟಿಯವರೆಗೂ ಸುಮಾರು ೧೦.೭ ಕಿ.ಮೀ. ದೂರದವರೆಗೂ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೋದಿ ರೋಡ್ ಶೋ ನಲ್ಲಿ ಪಾಲ್ಗೊಂಡರು. ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ನೆರೆದಿತ್ತು. ಹರ ಹರ ಮೋದಿ ಎಂಬ ಘೋಷಣೆ ಕೂಗಿ ಕಾರಿನ ಮೇಲೆ ಹೂ ಮಳೆ ಸುರಿದರು. ಕಟ್ಟಡಗಳ ಮೇಲೇರಿದ ಜನರು, ಬಿಜೆಪಿ ಬಾವುಟ ಪ್ರದರ್ಶಿಸುತ್ತಾ, ಮೋದಿ ಪರ ಜೈಕಾರ ಹಾಕಿ ಹರ್ಷೋದ್ಗಾರ ಮಾಡಿದರು. ಶಿವಮೊಗ್ಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಶಿವಮೊಗ್ಗಕ್ಕೆ ವಿಮಾನ ನಿಲ್ದಾಣದ ದೊರೆತಿದೆ. ಇಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇನೆ ಎಂದು ಮೋದಿ ಹೇಳಿದರು. ಈ ವೇಳೆ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ಮೋದಿಯವರು, ನೆರದಿದ್ದ ಜನರಿಗೆ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ಬಿಎಸ್ ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಲು ಹೇಳಿದರು. ೫೦ ವರ್ಷಗಳಿಂದ ಯಡಿಯೂರಪ್ಪನವರು ಜನಸೇವೆಯಲ್ಲಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ರಥ ಸಾಗುತ್ತಿದೆ. ವಿಮಾನಯಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ತಿಳಿಸಿದರು.

ನ್ಯಾಯಾಲಯದ ಮುಂದೆ ಹಾಜರಾದ ಮನೀಶ್ ಸಿಸೋಡಿಯಾ

ನವದೆಹಲಿ, ಫೆ. ೨೭: ಅಬಕಾರಿ ನೀತಿಗೆ ಸಂಬAಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಉಪ ಮುಖ್ಯಂತ್ರಿ ಮನೀಶ್ ಸಿಸೋಡಿಯಾ ನಗರದ ನ್ಯಾಯಾಲಯವೊಂದರ ಮುಂಭಾಗ ಸೋಮವಾರ ಹಾಜರಾದರು. ರೋಸ್ ಅವಿನ್ಯೂ ವಿಶೇಷ ನ್ಯಾಯಾಧೀಶ ಎಂಕೆ ನಾಗಪಾಲ್ ಅವರ ಮುಂದೆ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಹಾಜರುಪಡಿಸಿದ್ದು, ವಿಚಾರಣೆಗಾಗಿ ಅವರನ್ನು ಐದು ದಿನಗಳ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಕೋರ್ಟ್ ಆವರಣದ ಒಳಗೆ ಹಾಗೂ ಹೊರಗೆ ಬಿಗಿ ಭದ್ರತೆ ಆಯೋಜಿಸಲಾಗಿತ್ತು. ೨೦೨೧-೨೨ಕ್ಕೆ ಈಗ ರದ್ದಾದ ಮದ್ಯ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬAಧಿಸಿದAತೆ ಸಿಬಿಐ ಭಾನುವಾರ ಸಂಜೆ ಸಿಸೋಡಿಯಾ ಅವರನ್ನು ಬಂಧಿಸಿದೆ.

ಪ್ರಧಾನಿ ಮೋದಿ ಕರ್ನಾಟಕಕ್ಕೆ ಟೂರಿಸ್ಟ್- ಕಾಂಗ್ರೆಸ್ ಟೀಕೆ

ಬೆಂಗಳೂರು, ಫೆ. ೨೭: ಕರ್ನಾಟಕವು ಪ್ರತಿ ವರ್ಷ ನಿರಂತರ ಪ್ರವಾಹ ಎದುರಿಸಿದಾಗ, ಜನರ ಬದುಕು ಮುಳುಗಿದಾಗ, ಅಪಾರ ಆಸ್ತಿಪಾಸ್ತಿ ಹಾನಿಯಾದಾಗ ಕರ್ನಾಟಕದತ್ತ ತಿರುಗಿಯೂ ನೋಡದ, ನಯಾಪೈಸೆ ನೆರವು ನೀಡದ ಪ್ರಧಾನಿ ನರೇಂದ್ರ ಮೋದಿ ಈಗ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಟೂರಿಸ್ಟ್ ಆಗಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ಸಂಬAಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಹಿಂದೆ ಪ್ರಧಾನಿ ಭೇಟಿಗಾಗಿ ಹಾಕಿದ್ದ ರಸ್ತೆ ಕಿತ್ತು ಬಂದಿದ್ದಕ್ಕೆ ವರದಿ ಕೇಳಿದ್ದರು, ಆ ಲೂಟಿಯ ಬಗ್ಗೆ ತನಿಖೆಯೇ ಇಲ್ಲ. ಭ್ರಷ್ಟಾಚಾರದ ಆರೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿಯ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರರ ಪತ್ರಕ್ಕೆ ಪ್ರಧಾನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕರ್ನಾಟಕವನ್ನು ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಹೇಳಿದೆ. ಮೋದಿ ಸರ್ವಶಕ್ತ, ಸರ್ವಾಂತರ್ಯಾಮಿ ಎನ್ನುವ ಬಿಜೆಪಿ ಸರ್ವಶಕ್ತ ಮೋದಿಯವರಿಗೆ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲವೇಕೆ ಎಂದರೆ ಪಾಕಿಸ್ತಾನದ ಕಡೆ ಕೈ ತೋರಿಸುತ್ತಾರೆ! ಗ್ಯಾಸ್ ಬೆಲೆಯನ್ನು ರೂ. ೧,೦೦೦, ಪೆಟ್ರೋಲ್ ಬೆಲೆಯನ್ನು ರೂ.೧೦೦ ದಾಟಿಸಿ, ಜನರ ಬದುಕಿನ ಮೇಲೆ ಸರ್ಜಿಕಲ್ ಸ್ಟೆçöÊಕ್ ಮಾಡಿರುವ ಮೋದಿಯವರಿಗೆ ಧನ್ಯವಾದಗಳು. ಕರ್ನಾಟಕದಲ್ಲಿ ಭ್ರಷ್ಟಾಚಾರವು ಡಬಲ್ ವೇಗದಲ್ಲಿ ಮುನ್ನುಗ್ಗುತ್ತಿದೆ ಅಲ್ಲವೇ! ಎಂದು ಕಾಂಗ್ರೆಸ್ ಕೇಳಿದೆ.

ಮನೀಶ್ ಸಿಸೋಡಿಯಾ ಸಿಬಿಐ ವಶಕ್ಕೆ

ನವದೆಹಲಿ, ಫೆ. ೨೭: ಅಬಕಾರಿ ನೀತಿ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧನಕ್ಕೀಡಾಗಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ನ್ಯಾಯಾಲಯ ಮಾರ್ಚ್ ೪ ರವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ. ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ೫ ದಿನಗಳ ಕಾಲ ಅಂದರೆ ಮಾರ್ಚ್ ೪ ವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ. ಈಗ ರದ್ದುಪಡಿಸಲಾಗಿರುವ ಅಬಕಾರಿ ನೀತಿ ೨೦೨೧-೨೨ರ ರಚನೆ ಮತ್ತು ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ ಬಂಧಿಸಿತ್ತು. ಸಿಸೋಡಿಯಾ ಅವರನ್ನು ಇಂದು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ರೋಸ್ ಅವೆನ್ಯೂ ಕೋರ್ಟ್ ಸಂಕೀರ್ಣದ ಒಳಗೆ ಮತ್ತು ಹೊರಗೆ ಭಾರೀ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್‌ಪಾಲ್ ಅವರು ಸಿಸೋಡಿಯಾ ಅವರ ಕಸ್ಟಡಿ ವಿಚಾರಣೆಗೆ ಸಿಬಿಐ ಸಲ್ಲಿಸಿದ ಮನವಿಯನ್ನು ಅಂಗೀಕರಿಸಿದರು. ಇದಕ್ಕೂ ಮೊದಲು ಸಿಬಿಐ ಮತ್ತು ಸಿಸೋಡಿಯಾ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯವು ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು. ಮನೀಷ್ ಸಿಸೋಡಿಯಾ ಪರ ವಕೀಲರ ವಾದವನ್ನು ವಿರೋಧಿಸಿದ ಸಿಬಿಐ, ಯಾವುದೇ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ. ದೆಹಲಿಯ ಬಂಧಿತ ಉಪಮುಖ್ಯಮಂತ್ರಿ ಅವರು ಅಬಕಾರಿ ನೀತಿ ವಿಷಯದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾರೆ, ಆದರೆ ಅವರು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.