ಮಡಿಕೇರಿ, ಫೆ. ೨೭: ಬೆಳಗಾವಿಯ ವಿ.ಟಿ.ಯು (ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯೂನಿವರ್ಸಿಟಿ) ಅಧೀನದಲ್ಲಿನ ಮಂಗಳೂರಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿ.ಇ ಪದವಿ ಶಿಕ್ಷಣದ ಮೆರೈನ್ ಇಂಜಿನಿಯರಿAಗ್ ವಿಭಾಗದಲ್ಲಿ ಬೋಡಂಡ ಮಾನ್ಸಿ ಮುತ್ತಪ್ಪ ಅವರು ಪ್ರಥಮ ಸ್ಥಾನಗಳಿಸುವುದ ರೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೆಳಗಾವಿ ವಿ.ವಿಯಲ್ಲಿ ತಾ.೨೪ ರಂದು ನಡೆದ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹಲೂಟ್ ಅವರಿಂದ ಪದಕವನ್ನು ಸ್ವೀಕರಿಸಿದರು. ಮಾನ್ಸಿ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಡಿಕೇರಿ ಸಂತ ಜೋಸೆಫರ ಶಾಲೆಯಲ್ಲಿ ಪೂರೈಸಿದ್ದು, ಪಿ.ಯು ಶಿಕ್ಷಣವನ್ನು ಮೈಸೂರಿನ ವಿಶ್ವ ಪ್ರಜ್ಞಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಇವರು, ಮಡಿಕೇರಿ ನಿವಾಸಿ ವಕೀಲ ಬೋಡಂಡ ಮುತ್ತಪ್ಪ ಹಾಗೂ ಬೆಟ್ಟಗೇರಿ ಶಾಲೆಯ ಶಿಕ್ಷಕಿ ಬೋಡಂಡ ಭವ್ಯ ಮುತ್ತಪ್ಪ (ತಾಮನೆ ಕೇಳಪಂಡ) ದಂಪತಿ ಪುತ್ರಿ.