ಮುಳ್ಳೂರು, ಫೆ. ೨೫: ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಹಂಪಾಪುರ ಗ್ರಾಮದ ನಿವಾಸಿ ರಂಗಪ್ಪ (೫೯) ಅವರು ೬-೨-೨೦೨೩ ರಂದು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ವಾಸದ ಮನೆಯಿಂದ ಹೊರಗಡೆ ಹೋದವರು ಮನೆಗೆ ಈವರೆಗೂ ವಾಪಾಸಾಗಿಲ್ಲ ಎಂದು ರಂಗಪ್ಪ ಅವರ ಪುತ್ರ ಗೋಪಾಲ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಂಗಪ್ಪ ಅವರು ೫ ಅಡಿ ೩ ಇಂಚು ಉದ್ದವಿದ್ದು, ಸಾಧಾರಣ ಮೈಕಟ್ಟು, ಎಣ್ಣೆ ಕಪ್ಪು ಬಣ್ಣ, ಬಿಳಿ ತಲೆ ಕೂದಲು, ಕನ್ನಡ ಭಾಷೆ ಮಾತನಾಡುತ್ತಾರೆ, ಕಾಣೆಯಾದಾಗ ಬಿಳಿ ಬಣ್ಣದ ಶರ್ಟ್ ಮತ್ತು ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದು ಮಾತನಾಡುವಾಗ ತೊದಲಿಸುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾಣೆಯಾದ ಈ ವ್ಯಕ್ತಿಯನ್ನು ಗುರುತಿಸಿದವರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ ೦೮೨೭೨-೨೨೯೦೦೦ಗೆ ಅಥವಾ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ ೦೮೨೭೬-೨೮೩೩೩೩ ಹಾಗೂ ಮೊ.ನಂ-೯೪೮೦೮೦೪೯೫೪ ಗೆ ಮಾಹಿತಿ ನೀಡುವಂತೆ ಶನಿವಾರಸಂತೆ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.