ವೀರಾಜಪೇಟೆ, ಫೆ. ೨೬: ಜೆಡಿಎಸ್ ಪಕ್ಷ ಅಧಿಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಡ ಕಾರ್ಮಿಕ ಕುಟುಂಬಗಳಿಗೆ ಹಾಗೂ ರೈತರಿಗೆ ನೀಡಿದ ಕನಸಿನ ಯೋಜನೆಯ ಕೊಡುಗೆಯನ್ನು ರಾಜ್ಯದ ಜನರ ಮನೆ ಮನೆಗೆ ತಲಪಿಸುವ ಕರಪತ್ರ ಹಂಚುವ ಕಾರ್ಯಕ್ಕೆ ಜೆಡಿಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ರಾಜ್ಯ ಮಾಧ್ಯಮ ವಕ್ತಾರ ನರಸಿಂಹ ಮೂರ್ತಿ ಅವರು ಚಾಲನೆ ನೀಡಿದರು. ಈ ಸಂದರ್ಭ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಇಸಾಕ್ ಖಾನ್, ಕಾರ್ಯದರ್ಶಿ ಎನ್.ಸಿ. ಸುನಿಲ್, ಮಜೀದ್ ಚೋಕಂಡಳ್ಳಿ, ಸೈಫುದ್ದೀನ್ ಚಾಮಿಯಾಲ, ಅಮ್ಮತ್ತಿ ಜಯಮ್ಮ, ನೂರ್ ಅಹ್ಮದ್, ಟಿ.ಆರ್. ಹರ್ಷ, ನೌಫಲ್ ಮತ್ತಿತರರು ಇದ್ದರು.