ಮಡಿಕೇರಿ, ಫೆ. ೨೫: ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯನ್ ಶಾಪಿಂಗ್ ಮಾಲ್ ಮಾರಾಟ ಮೇಳ ತಾ. ೨೬ ರಂದು (ಇಂದು) ಮುಕ್ತಾಯಗೊಳ್ಳಲಿದೆ.
ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಮಾರಾಟ ಮೇಳದಲ್ಲಿ ಗೃಹೋಪಯೋಗಿ, ಅಲಂಕಾರಿಕ ವಸ್ತುಗಳು, ಪೀಠೋಪಕರಣಗಳು, ಬಟ್ಟೆ ಸೇರಿದಂತೆ ಇನ್ನಿತರ ಆಕರ್ಷಕ ವಸ್ತುಗಳು ಮಾರಾಟಗೊಂಡವು. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿಸಿದರು. ಕೊನೆಯ ದಿನವಾದ ಇಂದು ಮತ್ತಷ್ಟು ರಿಯಾಯಿತಿ ದರದಲ್ಲಿ ವಸ್ತುಗಳು ಮಾರಾಟಗೊಳ್ಳಲಿವೆ.