*ಗೋಣಿಕೊಪ್ಪ, ಫೆ. ೨೫: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಪ್ಪರ್ ಮೂರು ಪಲ್ಟಿಯಾದ ಘಟನೆ ತಿತಿಮತಿ ವ್ಯಾಪ್ತಿಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ೧೨:೪೫ಕ್ಕೆ ಗೋಣಿಕೊಪ್ಪದಿಂದ ಕುಶಾಲನಗರಕ್ಕೆ ಜಲ್ಲಿಕಲ್ಲು ತರಲು ತೆರಳುತ್ತಿದ್ದ ಸಂದರ್ಭ ಚಾಲಕನ ಅತೀ ವೇಗದ ಚಾಲನೆ ಟಿಪ್ಪರ್ ನಿಯಂತ್ರಣ ತಪ್ಪಲು ಕಾರಣವಾಗಿದೆ. ಇದರಿಂದ ಬಲಭಾಗದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಟಿಪ್ಪರ್ ಮಗುಚಿಕೊಂಡಿದೆ.

ಟಿಪ್ಪರ್ ಚಾಲಕ ಅಭಿ ಅಪಾಯದಿಂದ ಪಾರಾಗಿದ್ದಾನೆ.

ಶುಕ್ರವಾರ ಮಧ್ಯ ರಾತ್ರಿಯಿಂದ ಶನಿವಾರ ಸಂಜೆಯವರೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಈ ಭಾಗದಲ್ಲಿ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆೆ. ಕಾರ್ಮಿಕರನ್ನು ಕರೆದೊಯ್ಯುವ ಜೀಪುಗಳು ಮತ್ತು ಮರಳು ಕಲ್ಲುಗಳನ್ನು ತುಂಬಿ ಸಾಗುವ ಟಿಪ್ಪರ್‌ಗಳ ವೇಗ ನಿಯಂತ್ರಣಕ್ಕೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.