ಪೊನ್ನಂಪೇಟೆ, ಫೆ. ೨೫: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಫ್ಲೆöÊಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಳೆದ ೪ ದಿನಗಳಿಂದ ನಡೆಯುತ್ತಿರುವ ವೀರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಸೆಮಿ ಫೈನಲ್ನಲ್ಲಿ ಸೆಣೆಸಾಡಿದ ಬಲಿಷ್ಠ ಚೇಂದಿರ ಮತ್ತು ಕೊಂಗAಡ ತಂಡಗಳು ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿವೆ. ಈ ಎರಡು ತಂಡಗಳು ತಾ.೨೬ರಂದು (ಇಂದು) ಜರುಗಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಪ್ರಥಮ ಸೆಮಿ ಫೈನಲ್ ಪಂದ್ಯದಲ್ಲಿ ಚೇಂದಿರ ತಂಡವು ನಾಮೇರ ತಂಡವನ್ನು ತಂಡವನ್ನು ೭-೦ ಗೋಲುಗಳಿಂದ ಸೋಲಿಸಿ ಫೈನಲ್ ತಲುಪುವ ಕನಸನ್ನು ನನಸು ಮಾಡಿಕೊಂಡಿತು.
೨ನೇ ಸೆಮಿ ಫೈನಲ್ ಪಂದ್ಯದಲ್ಲಿ ಕೊಂಗAಡ ತಂಡ ತೀತಿಮಾಡ ತಂಡವನ್ನು ೬-೫ ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.
ತಾ. ೨೬ರಂದು (ಇಂದು) ಮಧ್ಯಾಹ್ನ ೨:೩೦ ಗಂಟೆಗೆ ಫೈನಲ್ ಪಂದ್ಯ ಜರುಗಲಿದೆ. ಇದಕ್ಕೂ ಮೊದಲು ಪಂದ್ಯಾವಳಿಯ ತೃತೀಯ ಸ್ಥಾನದ ಬಹುಮಾನಕ್ಕಾಗಿ ಸೆಮಿ ಫೈನಲ್ಸ್ಗಳಲ್ಲಿ ಪರಾಭವಗೊಂಡ ನಾಮೆರ ಮತ್ತು ತೀತಿಮಾಡ ಕುಟುಂಬ ತಂಡಗಳ ನಡುವೆ ಪಂದ್ಯ ಜರುಗಲಿದೆ.
ವಿ. ಬಾಡಗ ಹೈಫ್ಲೆöÊಯರ್ಸ್ ಸಂಸ್ಥೆಯ ಅಧ್ಯಕ್ಷರಾದ ಅಮ್ಮಣಿಚಂಡ ರಂಜಿ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಮಧ್ಯಾಹ್ನದ ನಂತರ ನಡೆಯಲಿರುವ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ.ಜಿ. ಬೋಪಯ್ಯ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಬೆಂಗಳೂರಿನ ಉದ್ಯಮಿ ಪಿ.ವಿ. ಮಂಜುನಾಥ್ ಬಾಬು, ಫೈರ್ ಪ್ರೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಂಬುಡುಮಾಡ ಎಸ್. ನರೇಂದ್ರ, ಕಾಫಿ ಬೆಳೆಗಾರರಾದ ಕೊಲ್ಲೀರ ಬೋಪಣ್ಣ, ಕೊಂಗAಡ ಕಾಶಿ ಕಾರ್ಯಪ್ಪ, ವಿ. ಬಾಡಗದ ಮಹಿಳಾ ಪ್ರಮುಖರಾದ ಕಂಜಿತAಡ ಕಮಲ ಬೆಳ್ಳಿಯಪ್ಪ, ಮಳವಂಡ ಬೋಜಮ್ಮ ಅಚ್ಚಪ್ಪ, ವಿ.ಬಾಡಗ ಹೈಫ್ಲೆöÊಯರ್ಸ್ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಮೊದಲಾದವರು ಭಾಗವಹಿಸಲಿದ್ದಾರೆ.