ಸೋಮವಾರಪೇಟೆ, ಫೆ.೨೪: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಶ್ರೀ ಹೊನ್ನಮ್ಮ ಕ್ಷೇತ್ರದ ಸಮೀಪವಿರುವ ಗವಿಬೆಟ್ಟಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ೫ ಎಕರೆಯಷ್ಟು ಕುರುಚಲು

ಕಾಡು ಬೆಂಕಿಗಾಹುತಿಯಾಗಿ ಅಪರೂಪದ ಪ್ರಾಣಿ ಪ್ರಭೇದಗಳು ನಾಶವಾಗಿವೆ.

ಪಕ್ಕದ ರಾಮಸ್ವಾಮಿ ಹಾಗೂ ನಂದೀಶ ಎಂಬವರ ಕಾಫಿ ತೋಟಕ್ಕೂ ಬೆಂಕಿ ಆವರಿಸಿದ್ದು, ಕಾಫಿ ಗಿಡ, ಕಾಳುಮೆಣಸು ಬಳ್ಳಿಗಳು ಹಾಗೂ ಸಿಲ್ವರ್ ಮರಗಳಿಗೆ ಹಾನಿಯಾಗಿದೆ. ಸಂಜೆ ವೇಳೆಯಲ್ಲಿ ಬೆಟ್ಟದಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದು, ದೊಡ್ಡಮಳ್ತೆ ಗ್ರಾಮಸ್ಥರು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.