ಚೆಯ್ಯAಡಾಣೆ, ಫೆ. ೨೪: ಸ್ಥಳೀಯ ಕರ್ನಾಟಕ ಬ್ಯಾಂಕ್ ಶಾಖೆಯು ೧೦೦ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಇದರ ಅಂಗವಾಗಿ ಬ್ಯಾಂಕ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಾಖೆಯ ವ್ಯವಸ್ಥಾಪಕ ಉಮೇಶ್ ಯುಆರ್‌ಎಸ್ ಕರ್ನಾಟಕ ಬ್ಯಾಂಕ್‌ನ ಶತಮಾನೋತ್ಸವದ ಕುರಿತು ಗ್ರಾಹಕರಿಗೆ ಮಾಹಿತಿ ನೀಡಿದರು.

ಸ್ಥಳೀಯ ಗ್ರಾಹಕರಾದ ಎನ್.ಸಿ. ಗಣಪತಿ ಮಾತನಾಡಿ, ಕರ್ನಾಟಕ ಬ್ಯಾಂಕ್‌ನ ಕಾರ್ಯವೈಖರಿಯ ಕುರಿತು ಶ್ಲಾಘಿಸಿದರು. ಮೀನಾಕ್ಷಿ ಪ್ರಾರ್ಥನೆ ಮಾಡಿದರು.