(ವಿಶೇಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಫೆ. ೨೪: ಕೊಡಗು ಜಿಲ್ಲೆಯಲ್ಲಿ ಜನವರಿ ೨೫ ರಿಂದ ಫೆಬ್ರವರಿ ೨೫ ವರೆಗೆ ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರು ಹಾಗೂ ಇತರ ಕಾರ್ಮಿಕರ ‘ಬೋಗಸ್ ಕಾರ್ಡ್’ ಪತ್ತೆ ಹಚ್ಚುವ ಅಭಿಯಾನದಲ್ಲಿ ೧೦೧ ಕಾರ್ಮಿಕರಲ್ಲಿ ಬೋಗಸ್ ಕಾರ್ಡ್ ಪತ್ತೆಯಾಗಿದೆ.

ಕೊಡಗು ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ೧೦,೬೯೪ ಕಟ್ಟಡ ಹಾಗೂ ಇತರ ಕಾರ್ಮಿಕರು ನೋಂದಣಿ ಯಾಗಿ, ಕಾರ್ಮಿಕರ ಕಾರ್ಡ್ ಪಡೆದಿದ್ದಾರೆ.

ಅದರಲ್ಲಿ ೧೦೧ ಕಾರ್ಮಿಕರು ನಕಲಿ ದಾಖಲೆಗಳನ್ನು ನೀಡಿ, ಕಾರ್ಮಿಕರ ಕಾರ್ಡ್ ಪಡೆದುಕೊಂಡು,

ಸರ್ಕಾರ ಕಾರ್ಮಿಕರಿಗೆ ನೀಡುವ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ ಎಂಬ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ.

೧೦೧ ಬೋಗಸ್ ಕಾರ್ಡ್ನಲ್ಲಿ ೫೯ ಮಹಿಳೆಯರೇ ಆಗಿದ್ದಾರೆ.

ಯಾವುದೇ ಕಟ್ಟಡ ಹಾಗೂ ಇತರೆ ಕಾರ್ಮಿಕ ಕೆಲಸದಲ್ಲಿ ತೊಡಗಿಸಿ ಕೊಳ್ಳದ ಮಹಿಳೆಯರು ಕೋವಿಡ್ ಬಳಿಕ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡು, ಸರ್ಕಾರದ ಯೋಜನೆಗಳನ್ನು ಪಡೆದಿದ್ದಾರೆ ಎಂದು ‘ಬೋಗಸ್ ಕಾರ್ಡ್’ ಅಭಿಯಾನದಲ್ಲಿ ಪತ್ತೆಯಾಗಿದೆ.

ಮನೆಯಲ್ಲಿ ಕುಳಿತುಕೊಂಡು, ಯಾವುದೇ ಕೆಲಸಗಳನ್ನು ಮಾಡದೇ, ಇರುವ ಮಹಿಳೆಯರಿಗೂ ಕೂಡ ಕಾರ್ಡ್ ಮಾಡಿಕೊಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ ಅನೇಕ ಕಾರ್ಮಿಕ ಬೋಗಸ್ ಕಾರ್ಡ್ ಇದೆ ಎನ್ನಲಾಗುತ್ತಿದೆ.

ಕೋವಿಡ್ ಬಳಿಕ ಸರ್ಕಾರ ಕಟ್ಟಡ ಕಾರ್ಮಿಕರು ಹಾಗೂ ಇತರ ಕಾರ್ಮಿಕರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಮಧ್ಯವರ್ತಿಗಳ ಮೂಲಕ ಕಾರ್ಮಿಕ ಕಾರ್ಡ್ ಪಡೆದುಕೊಂಡು ಕೋವಿಡ್ ಸಂದರ್ಭದಲ್ಲಿ ಕೂಡ ಕಾರ್ಮಿಕ ಇಲಾಖೆಯಿಂದ ಯೋಜನೆಗಳನ್ನು ಪಡೆದುಕೊಂಡಿದ್ದಾರೆ.

ಮರಳು, ಸಿಮೆಂಟ್ ಮುಟ್ಟದವರ ಬಳಿಯೂ ಕಾರ್ಡ್!

ಮರಳು, ಸಿಮೆಂಟ್ ಮುಟ್ಟ ದವರ ಬಳಿ ಕೂಡ ಕಾರ್ಮಿಕರ ಕಾರ್ಡ್ ಕಂಡು ಬಂದಿದೆ. ಅದರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ.

ಅಸಂಘಟಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರಿಗೆ ಅನುಕೂಲವಾಗಲಿ

(ಮೊದಲ ಪುಟದಿಂದ) ಎಂದು ಸರ್ಕಾರ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮಾಡಲಾಗುತ್ತಿದೆ.

ಒಂದೇ ಮನೆಯಲ್ಲಿ ಒಂದಿಬ್ಬರು ಕಟ್ಟಡ ಕಾರ್ಮಿಕರು ಇರುತ್ತಾರೆ.

ಗಂಡ ಗಾರೆ ಕೆಲಸದಲ್ಲಿ ತೊಡಗಿಕೊಂಡಿದ್ದರೆ, ಆತನ ಹೆಂಡತಿ ಹಾಗೂ ೧೮ ವರ್ಷದ ತುಂಬಿದ ಮಕ್ಕಳಿಗೂ ಕೂಡ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡು ಕಾರ್ಮಿಕ ಇಲಾಖೆಯ ಯೋಜನೆಗಳನ್ನು ಪಡೆದುಕೊಂಡಿದ್ದಾರೆ.

೨೦೦೭ರಲ್ಲಿ ಕಾರ್ಮಿಕ ಕಾರ್ಡ್ ಸೇವೆ ಆರಂಭಗೊAಡಾಗ ನೋಂದಣಿ ಮತ್ತು ನವೀಕರಣ ಶುಲ್ಕವನ್ನು ನಿಗದಿಪಡಿಸಲಾಗಿತ್ತು.

ಕೋವಿಡ್ ಬಳಿಕ ಸರ್ಕಾರ ನೋಂದಣಿ ಮತ್ತು ನವೀಕರಣ ಶುಲ್ಕವನ್ನು ರದ್ದು ಮಾಡಿದೆ.

ಮಧ್ಯವರ್ತಿಗಳು ಕಟ್ಟಡ ಕಾರ್ಮಿಕರೇ ಅಲ್ಲದವರಿಂದ ಹಣ ಪಡೆದು, ಕಾರ್ಮಿಕರ ಕಾರ್ಡ್ ಮಾಡಿಕೊಟ್ಟಿದ್ದಾರೆ.

ಇನ್ನೂ ಅನೇಕ ಮಹಿಳೆಯರು ಬೋಗಸ್ ಕಾರ್ಡ್ ಪಡೆದುಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಕೊಡಗು ಜಿಲ್ಲೆಯಲ್ಲಿ ೧೦,೬೯೪ ರಲ್ಲಿ ಕೇವಲ ೧೦೧ ಬೋಗಸ್ ಕಾರ್ಮಿಕರ ಕಾರ್ಡ್ ಪತ್ತೆಯಾಗಿದೆ.ಕಟ್ಟಡ ಮತ್ತು ಇತರೆ ಕಾರ್ಮಿಕರಲ್ಲದ ೩,೫೦೦ಕ್ಕೂ ಹೆಚ್ಚು ಜನರು ಕಾರ್ಮಿಕರ ಕಾರ್ಡ್ ಪಡೆದುಕೊಂಡು ಇಲಾಖೆಯಿಂದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿರುವ ವ್ಯಕ್ತಿಯ ಮನೆಯಲ್ಲಿ ಇರುವ ಎಲ್ಲರೂ ಕಟ್ಟಡ ಕಾರ್ಮಿಕರ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.