ಮಡಿಕೇರಿ, ಫೆ. ೨೩: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೊಮ್ಮೂರು ಅಗ್ರಹಾರದಲ್ಲಿರುವ ಕಾವೇರಿ ಸನ್ನಿಧಿ ಫಾರ್ ಇಂಡಿಯನ್ ಕಲರ್ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಕಾವೇರಿ ಕನ್ಯಾ ಗುರುಕುಲಂ ವತಿಯಿಂದ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಯುವತಿಯರಿಗೆ ಎರಡು ವರ್ಷಗಳ ಉಚಿತ ಶಿಕ್ಷಣ ಒದಗಿಸಲಾಗುತ್ತದೆ ಎಂದು ಸಂಸ್ಥೆಯ ಸ್ಥಾಪಕ ಡಾ. ಕೆ.ಕೆ. ಸುಬ್ರಮಣಿ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿ ದೂರಶಿಕ್ಷಣ ನೀಡುವುದರೊಂದಿಗೆ ಕಂಪ್ಯೂಟರ್ ಶಿಕ್ಷಣ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿಕೆ, ಅಧ್ಯಾತ್ಮ, ಯೋಗ, ಧ್ಯಾನ, ಪ್ರಾಣಾಯಾಮ, ಶಾಸ್ತಿçÃಯ ಸಂಗೀತ, ಭಗವದ್ಗೀತೆ, ಶ್ಲೋಕ ಪಠಣ, ಕೃಷಿಯ ಕುರಿತು ತರಬೇತಿ ನೀಡಲಾಗುವುದು. ಊಟ, ವಸತಿಯನ್ನು ಉಚಿತವಾಗಿ ಒದಗಿಸಲಾಗುತ್ತದೆ. ಅರ್ಹ ೧೫ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ವಿವರಿಸಿದರು.
ಭಾರತೀಯ ಪಾರಂಪರಿಕ ವಿದ್ಯೆ ಕಲಿಸುವ ನಿಟ್ಟಿನಲ್ಲಿ ಗುರುಕುಲ ಕೆಲಸ ಮಾಡುತ್ತಿದೆ. ನುರಿತ ಬೋಧಕರು ದೂರಶಿಕ್ಷಣದಡಿ ಬೋಧಿಸಲಿದ್ದಾರೆ. ಯುವಜನಾಂಗಕ್ಕೆ ವೇದ, ಉಪನಿಷತ್ತು ಕುರಿತು ಆಸಕ್ತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಯಾವುದೇ ಧರ್ಮ, ಜಾತಿಯವರು ಮುಕ್ತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ೯೦೦೮೭೯೦೭೦೯, ೭೮೯೯೪೭೮೮೭೬ ಅನ್ನು ಸಂಪರ್ಕಿಸುವAತೆ ಕೋರಿದರು.
ಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕಿ ಕೆ.ಎಸ್. ಕಲ್ಪನಾ, ಉಪನ್ಯಾಸಕರುಗಳಾದ ಎಂ.ಎ. ಶೈಲಜಾ, ಕೆ.ಆರ್. ಅಜಯ್ ಹಾಜರಿದ್ದರು.