ಮಡಿಕೇರಿ, ಫೆ. ೨೨ : ಬಂಟರ ಸಮುದಾಯಕ್ಕೆ ಸೇರಿದ ಬಂಟರ ರುದ್ರಭೂಮಿ ‘ಶಾಂತಿಧಾಮ’ ನವೀಕೃತ ಕಟ್ಟಡ ಹಾಗೂ ಜಾಗವನ್ನು ನಿರ್ವಹಣಾ ಸಮಿತಿಗೆ ಹಸ್ತಾಂತರ ಮಾಡಲಾಯಿತು.

ಮಡಿಕೇರಿಯ ಸ್ಟೋನ್ ಹಿಲ್ ಬಳಿ ಇರುವ, ಪಾಳು ಬಿದ್ದಿದ್ದ ಜಾಗವನ್ನು ಸುಸಜ್ಜಿತಗೊಳಿಸಿ ಕಟ್ಟಡ ಸೇರಿದಂತೆ ಸಿಲಿಕಾನ್ ಚೇಂಬರ್ ಅಳವಡಿಸಲಾಗಿರುವ ಕಟ್ಟಡವನ್ನು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಅವರು ನಗರಸಭಾ ಸದಸ್ಯ ಅರುಣ್ ಶೆಟ್ಟಿ, ಪ್ರಭು ರೈ ಹಾಗೂ ಶೇಷಪ್ಪ ರೈ ಅವರುಗಳಿಗೆ ನಿರ್ವಹಣೆಗಾಗಿ ಹಸ್ತಾಂತರ ಮಾಡಿದರು.

ಬಳಿಕ ಮಾತನಾಡಿದ ಜಗದೀಶ್ ರೈ; ತಾನು ಅಧ್ಯಕ್ಷನಾದ ಕೂಡಲೇ ಸಂಘದ ಕಟ್ಟಡಕ್ಕೆ ದಾನಿಗಳು ನೀಡಿರುವ ಜಾಗ ಹಾಗೂ ರುದ್ರಭೂಮಿಗೆ ಸೇರಿದ ಜಾಗವನ್ನು ಪರಿಶೀಲನೆ ಮಾಡಿ ಮೊದಲು ರುದ್ರಭೂಮಿಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ನವೀಕರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸುತ್ತಲೂ ಉದ್ಯಾನ, ಇಂಟರ್‌ಲಾಕ್ ಅಳವಡಿಸ ಲಾಗುವದು. ಈ ಪ್ರದೇಶವನ್ನು ಸ್ಮಶಾನವೆಂದು ಪರಿಗಣಿಸದೆ ಎಲ್ಲರ ಮನಸಿಗೆ ಶಾಂತಿಯನ್ನು ನೀಡುವಂತಹ ಶಾಂತಿಧಾಮವೆAದು ನೋಡಿ ಕೊಳ್ಳೋಣ, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಹಿರಿಯರಾದ ಕೊರಗಪ್ಪ ರೈ ಮಾತನಾಡಿ; ಈ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಬಂಟ ಸಮುದಾಯದವರು ಸಮಾಜದಲ್ಲಿ ಹಿಂದುಳಿದಿದ್ದು, ಮುಂದೆ ಬರಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಯುವ ಜನರು ಆಸಕ್ತಿ ವಹಿಸಬೇಕೆಂದು ಹೇಳಿದರು.

ಉಪಾಧ್ಯಕ್ಷ ರವೀಂದ್ರ ರೈ ಮಾತನಾಡಿ

(ಮೊದಲ ಪುಟದಿಂದ) ೧೯೮೧ರಲ್ಲಿ ಜಾಗ ಲಭ್ಯವಾಗಿದ್ದು ಇದುವರೆಗೆ ನಿರ್ವಹಣೆ ಇರಲಿಲ್ಲ. ಇದೀಗ ಅಭಿವೃದ್ಧಿ ಆಗಿದ್ದು ಸರಿಯಾಗಿ ನಿರ್ವಹಣೆ ಮಾಡಿಕೊಂಡು ಹೋಗಬೇಕೆಂದು ಸಲಹೆ ಮಾಡಿದರು.

ಮತ್ತೋರ್ವ ಗೌರವ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ; ರುದ್ರಭೂಮಿಗೆ ಜಾಗ ಪಡೆಯಲು ಹಲವಾರು ಅಡೆತಡೆಗಳಿದ್ದವು, ಆದರೂ ನಿರಂತರ ಪ್ರಯತ್ನದಿಂದಾಗಿ ಅರ್ಧ ಎಕರೆ ಜಾಗ ಸಿಕ್ಕಿದೆ.ದಾನಿಗಳ ಸಹಕಾರದಿಂದ ಒಂದಷ್ಟು ಕೆಲಸಗಳಾಗಿದ್ದು, ಅವರುಗಳನ್ನು ನೆನೆಸಿಕೊಳ್ಳಬೇಕಿದೆ. ಇದೀಗ ಸಂಘಟನೆಯಲ್ಲಿ ಸಾಕಷ್ಟು ಯುವಕರಿದ್ದು, ಎಲ್ಲರೂ ಸೇರಿಕೊಂಡು ಅಭಿವೃದ್ಧಿ ಮಾಡಬೇಕು. ಹಾಗೆಯೇ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಖಜಾಂಚಿ ರತ್ನಾಕರ ರೈ, ಜಯಕೃಷ್ಣ ಶೆಟ್ಟಿ, ರವೀಂದ್ರ ರೈ, ಬಾಲಕೃಷ್ಣ ರೈ, ಪ್ರಮೋದ್ ಕುಮಾರ್ ರೈ, ಜಯರಾಮ ರೈ, ದಿನೇಶ್ ಕುಮಾರ್ ರೈ, ಹರೀಶ್ ರೈ, ಶರತ್ ಶೆಟ್ಟಿ, ಮನೋಜ್, ನಂದ ಶೆಟ್ಟಿ, ಶ್ರೀನಿವಾಸ್ ರೈ ಸೇರಿದಂತೆ ಇತರರು ಹಾಜರಿದ್ದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರ್ವಹಿಸಿದರು.