ಗೋಣಿಕೊಪ್ಪ ವರದಿ, ಫೆ. ೨೩: ಪಯ್ಯಾವೂರ್ ಹಬ್ಬದಲ್ಲಿ ಗುರುವಾರ ಒಯಿಂಬದೂಟ್ ಆಚರಣೆ ನಡೆಯಿತು. ಮುಂಡಿಯೋಳAಡ ಮತ್ತು ಬೊವ್ವೇರಿಯಂಡ ಕುಟುಂಬದ ಮುಂದಾಳತ್ವದಲ್ಲಿ ವಿವಿಧ ಆಚರಣೆ ನಡೆಸಲಾಯಿತು.
ನಾಡ್ಕ್ಕಾರಡ ಅಕ್ಕಿ ತೊರಿಯೊ ಕಾರ್ಯ ನಡೆಯಿತು. ಬೊಳಕ್ ಶಾಸ್ತç ಮಾಡಲಾಯಿತು .೨೫ ರಿಂದ ೫೦ ತೆಂಗಿನಕಾಯಿ ಅರ್ಪಣೆ ಮಾಡಲಾಯಿತು. ದೇವರ ದರ್ಶನದಲ್ಲಿ ೧೧ ಸುತ್ತು ದೇವರಮೂರ್ತಿ ಪ್ರದಕ್ಷಿಣೆ ಆಚರಿಸಲಾಯಿತು. ಮುಂಡಿಯೋಳAಡ ಕುಟುಂಬದ ಕಾಡ್ಲಯ್ಯಪ್ಪ ಮತ್ತು ಬೈಸಿಪೋದಿ ದೇವರು ದರ್ಶನ ನೀಡಿತು. ಕಡಿಯತ್ನಾಡ್ಗೆ ಸೇರುವ ಕರಡ, ಪಾಲಂಗಾಲ, ಕರಿನೆರವಂಡ, ಪಟ್ರಪಂಡ, ಐತಿಚಂಡ, ಬೇಪಡಿಯಂಡ, ವಾನಂಡ, ಕರ್ತಂಡ ಕುಟುಂಬಸ್ಥರು ಪಾಲ್ಗೊಂಡರು.