ಕಣಿವೆ, ಫೆ. ೨೨: ಕಳೆದ ಕೆಲವು ತಿಂಗಳ ಹಿಂದಷ್ಟೇ ಕುಶಾಲನಗರ ಪುರಸಭೆಗೆ ಲೀನವಾಗಿದ್ದ ಮುಳ್ಳುಸೋಗೆ ಗ್ರಾ.ಪಂ. ಕಟ್ಟಡ ನೂತನ ಕುಶಾಲನಗರ ತಾಲೂಕಿನ ತಾಲೂಕು ಪಂಚಾಯಿತಿ ಕಚೇರಿಯಾಗಿ ಮಾರ್ಪಾಡು ಹೊಂದಲಿದೆ.
ಈ ಸಂಬAಧ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಜಯಣ್ಣ, ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ ಹಾಗೂ ಮುಖ್ಯಾಧಿಕಾರಿ ವೆಂಕಟೇಶ ನಾಯಕ್ ಮತ್ತಿತರರು ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿದರು.
ಈಗಾಗಲೇ ರಾಜ್ಯ ಸರ್ಕಾರ ಕುಶಾಲನಗರ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹುದ್ದೆಗಳನ್ನು ಸೃಜಿಸಿ ಆಡಳಿತಾತ್ಮಕವಾದ ಮಂಜೂರಾತಿ ನೀಡಿರುವ ಹಿನ್ನೆಲೆ ಯಲ್ಲಿ ಕುಶಾಲನಗರ ತಾಲೂಕಿನ ಸಾರ್ವಜನಿಕರ ಹಿತವನ್ನು ಮನಗಂಡು ಕೂಡಲೇ ಕಾರ್ಯಾಲಯ ತೆರೆಯುವಂತೆ ಸೂಚಿಸಿರುವುದರಿಂದ ಕಟ್ಟಡಗಳನ್ನು ಪರಿಶೀಲಿಸಿರುವುದಾಗಿ ಇಒ ಜಯಣ್ಣ ‘ಶಕ್ತಿ'ಗೆ ತಿಳಿಸಿದರು.
ಕೊಡಗು ಜಿಲ್ಲಾಧಿಕಾರಿ ಡಾ. ಸತೀಶ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಡಾ. ಆಕಾಶ್ ಅವರ ನಿರ್ದೇಶನದ ಮೇರೆಗೆ ಸ್ಥಳ ಪರಿಶೀಲಿ ಸಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ತಾಲೂಕು ಕಚೇರಿ ಆರಂಭ ವಾಗಲಿದೆ ಎಂದು ಜಯಣ್ಣ ತಿಳಿಸಿದರು.