ವೀರಾಜಪೇಟೆ, ಫೆ. ೨೨: ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ಆನೆ ದಾಳಿಯಿಂದ ಬೆಳೆ ನಾಶವಾಗಿದೆ.
ಗ್ರಾಮದ ಪುಲಿಯಂಡ ಪಿ. ಡೆನ್ನಿ, ಪುಲಿಯಂಡ ತಿಮ್ಮಯ್ಯ ಸೇರಿದಂತೆ ಅನೇಕ ರೈತರ ತೋಟಗಳಿಗೆ ಲಗ್ಗೆ ಹಾಕಿದ ಆನೆಗಳು ಕಾಫಿ, ಅಡಿಕೆ, ಏಲಕ್ಕಿ ಮುಂತಾದ ಗಿಡಗಳನ್ನು ಸಂಪೂರ್ಣವಾಗಿ ನಾಶಮಾಡಿ ಲಕ್ಷಾಂತರ ರೂ. ನಷ್ಡಪಡಿಸಿವೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ವಿತರಿಸುವ ಭರವಸೆ ನೀಡಿದ್ದು, ಆನೆ ದಾಳಿ ತಡೆಗೆ ಶಾಶ್ವತ ಕ್ರಮ ವಹಿಸಲು ಒತ್ತಾಯಿಸಿದ್ದಾರೆ.