ಮುಳ್ಳೂರು, ಫೆ. ೨೩: ಕೊಡಗು ಜಿಲ್ಲೆಯಲ್ಲಿರುವ ಕೃಷಿ ಸಹಕಾರ ಸಂಸ್ಥೆಗಳು ದೇಶದ ಸಹಕಾರ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಅಭಿಪ್ರಾಯಪಟ್ಟರು.

ಸಮಿಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಬಾರ್ಡ್ ಸಾಲ ಸಹಾಯಧನದಿಂದ ನಿರ್ಮಿಸಿರುವ ನೂತನ ಗೋದಾಮು ಕಟ್ಟಡವನ್ನು ಉದ್ಘಾಟಿಸಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿ, ರೈತರ ಪ್ರಗತಿಗಾಗಿ ಹುಟ್ಟು ಹಾಕಿದ ಗ್ರಾಮೀಣ ಪ್ರದೇಶದ ಕೃಷಿ ಸಹಕಾರ ಸಂಸ್ಥೆಗಳು ಇಂದು ದೇಶದಲ್ಲಿ ಬೃಹತ್ ಸಹಕಾರ ಕ್ಷೇತ್ರವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕೇಂದ್ರ ಸಹಕಾರ ಬ್ಯಾಂಕ್‌ಗಳು ಸಾಲ ನೀಡುತ್ತಿದ್ದು ಈ ಮೂಲಕ ಕೃಷಿ ಸಹಕಾರ ಬ್ಯಾಂಕ್‌ಗಳು ರಾಷ್ಟಿçÃಕೃತ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಸರಿಸಮಾನವಾಗಿ ಪೈಪೋಟಿ ನೀಡುವಷ್ಟು ಪ್ರಗತಿ ಸಾಧಿಸುತ್ತಿದೆ ಎಂದರು.

ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸ್ಥಳೀಯ ಕೃಷಿ ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ಸೌಲಭ್ಯ ನೀಡುವುದರ ಜೊತೆಯಲ್ಲಿ ಸಂಘವು ವಾಣಿಜ್ಯ ಸಂಕೀರ್ಣ ಗೋದಾಮು ಕಟ್ಟಡ, ಸಭಾಂಗಣ ಇನ್ನಿತ್ತರ ಕಟ್ಟಡಗಳನ್ನು ನಿರ್ಮಿಸುತ್ತಿದ್ದು ಸಾರ್ವಜನಿಕರ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದೆ. ಸಹಕಾರಿಗಳ ಸಹಕಾರದಿಂದ ಸಂಘದ ಬೆಳವಣಿಗೆ ಸಾಧ್ಯ ಇರುವುದರಿಂದ ಸಂಘದ ಸದಸ್ಯರು ಕೃಷಿ ಸಾಲ ಸೌಲಭ್ಯ ಪಡೆದುಕೊಳ್ಳುವುದರ ಜೊತೆಯಲ್ಲಿ ಸಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ತನ್ನದೆಯಾದ ಸಹಕಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.

ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು ಗಳಾದ ಬಿ.ಡಿ. ಮಂಜುನಾಥ್, ಬಿ.ಕೆ. ಚಿಣ್ಣಪ್ಪ ಮಾತನಾಡಿದರು. ನಿಡ್ತ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಸಂಘವು ನಡೆದು ಬಂದ ಹಾದಿ ಸಂಘದ ಈಗಿನ ಬೆಳವಣಿಗೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಈ. ಮೋಹನ್, ಸಂಘದ ಉಪಾಧ್ಯಕ್ಷ ತೀರ್ಥಾನಂದ್, ಸಂಘದ ಕಾರ್ಯನಿರ್ವಹಣಾಧಿಕಾರಿ ಜಿ.ಜೆ. ಮಂಜಪ್ಪ, ನಿದೇರ್ಶಶಕರುಗಳಾದ ಹೆಚ್.ಪಿ. ಶೇಷಾದ್ರಿ, ಡಿ.ಬಿ. ಧರ್ಮಪ್ಪ, ಎಂ.ಎಸ್. ತಂಗಮ್ಮ, ಲಿಂಗರಾಜು, ಕಾರ್ತಿಕ್, ಕಿರಣ್, ಜಗದೀಶ್, ಪೊನ್ನಪ್ಪ, ದೊಡ್ಡೇಗೌಡ, ಪುಟ್ಟಯ್ಯ, ಸಹಕಾರ ಸಂಘದ ಮೇಲ್ವಿಚಾರಕ ಸುಮಂತ್ ಮುಂತಾದವರಿದ್ದರು.