ಪೆರಾಜೆ, ಫೆ. ೨೨: ಗ್ರಾಮೀಣ ಜನತೆ, ಸ್ವಸಹಾಯ ಗುಂಪುಗಳ ಸದಸ್ಯರುಗಳಿಗೆ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ಬ್ಯಾಂಕಿAಗ್ ಬಗ್ಗೆ ತಿಳುವಳಿಕೆ ಮೂಡಿಸಲು ನಬಾರ್ಡ್ ಆಶ್ರಯದಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ಮತ್ತು ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ. ಸಹಕಾರ ಸಂಘದ ಸಹಯೋಗದಲ್ಲಿ ಪಯಸ್ವಿನಿ ಸೊಸೈಟಿಯ ಬಾಲಂಬಿ ಶಾಖೆಯ ಸಭಾಂಗಣದಲ್ಲಿ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅನಂತ್ ಊರುಬೈಲು ಕಾರ್ಯಾಗಾರ ಉದ್ಘಾಟಿಸಿದರು. ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿ. ರಮೇಶ್ ಬಾಬು ಗ್ರಾಮೀಣ ಜನತೆಗೆ ನಬಾರ್ಡ್ ಮೂಲಕ ಗ್ರಾಮೀಣ ಅಭಿವೃದ್ಧಿಯ ಭಾಗವಾಗಿ ಕೈಗೊಂಡ ವಿಮಾ ಸೌಲಭ್ಯಗಳು, ಆರ್ಥಿಕ ಭದ್ರತೆಯ ಬಗ್ಗೆ ಮಾಹಿತಿ ನೀಡಿದರು. ಆರ್ಥಿಕ ಸಾಕ್ಷರತೆಯ ಬಗ್ಗೆ ಕೊಡಗು ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಭಾಸ್ಕರ್ ಮತ್ತು ಡಿಜಿಟಲ್ ಬ್ಯಾಂಕಿAಗ್ ಮತ್ತು ಉಳಿತಾಯ, ಮಿತವ್ಯಯದ ಬಗ್ಗೆ ಕೆಡಿಸಿಸಿ ಬ್ಯಾಂಕ್ ಅಧಿಕಾರಿ ಶಶಿಕುಮಾರ್ ಸವಿಸ್ತಾರವಾಗಿ ಮಾತನಾಡಿದರು. ಪಯಸ್ವಿನಿ ಸೊಸೈಟಿ ಸಿಇಓ ಬಿ.ಕೆ ಆನಂದ ಸ್ವಾಗತಿಸಿ, ಕೆಡಿಸಿಸಿ ಮಾರುಕಟ್ಟೆ ಅಧಿಕಾರಿ ನವೀನ್ ನಂಜಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಾಜಾರಾಮ ಕೆ.ಆರ್., ಸಂಘದ ನಿರ್ದೇಶಕರು, ಸಹಕಾರಿ ಗಣ್ಯರು, ಸ್ವಸಹಾಯ ಗುಂಪು ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.