*ಗೋಣಿಕೊಪ್ಪ, ಫೆ. ೨೧: ತಿತಿಮತಿ ಸೇವಾಭಾರತಿ ಮತ್ತು ಕಿಮ್ಸ್ ವತಿಯಿಂದ ದೇವಮ್ಮಚ್ಚಿ, ಕಾರೆಕಂಡಿ ಹಾಡಿಯಲ್ಲಿ ವೈದ್ಯಕೀಯ ಶಿಬಿರ ನಡೆಸಲಾಯಿತು. ೭ ವೈದ್ಯರು ಹಾಗೂ ೧೦ ಸ್ವಯಂಸೇವಕರು ವೈದ್ಯಕೀಯ ಚಿಕಿತ್ಸೆಯನ್ನು ಹಾಡಿ ನಿವಾಸಿಗಳಿಗೆ ತಲುಪಿಸಿದರು. ಸುಮಾರು ೬೬ ಹಾಡಿ ನಿವಾಸಿಗಳು ಮತ್ತು ಮಕ್ಕಳು ಸೌಲಭ್ಯ ಪಡೆದುಕೊಂಡರು. ಹಾಡಿಯ ಮಕ್ಕಳ ಜೊತೆಗೆ ೧೦೩ ಮತ್ತು ೧೦೭ ವರ್ಷದ ವೃದ್ಧೆಯರು ಭಾಗವಹಿಸಿದು ವಿಶೇಷವಾಗಿತ್ತು.