ಕಣಿವೆ, ಫೆ. ೨೧: ಕುಶಾಲನಗರದ ಬೈಚನಹಳ್ಳಿಯ ಗ್ರಾಮದೇವತೆ ಮಾರಮ್ಮ ತಾಯಿಯ ವಾರ್ಷಿಕ ಪೂಜೋತ್ಸವದ ಅಂಗವಾಗಿ ದೇವತಾ ಮೂರ್ತಿಯನ್ನು ಬಗೆಬಗೆಯ ಪುಷ್ಪಗಳು, ಚಿನ್ನಾಭರಣಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮದಾಸ್, ನಿರ್ದೇಶಕರಾದ ಮುತ್ತಣ್ಣ, ಕೆ.ಎನ್. ಅಶೋಕ್, ಜಗದೀಶ್, ಎಂ.ಎA. ಚರಣ್, ಹೆಚ್.ಎನ್. ರಾಮಚಂದ್ರ, ಪುರಸಭಾ ಸದಸ್ಯ ಬಿ.ಎಲ್. ಜಗದೀಶ್, ಗೆಳೆಯರ ಬಳಗದ ಅಧ್ಯಕ್ಷ ಶ್ರೀಕಾಂತ್ ಮೊದಲಾದವರಿದ್ದರು.
ಪೂಜೋತ್ಸವದ ಸಂದರ್ಭ ಮಹಿಳೆಯರಿಂದ ದೇವತಾ ಭಜನೆ ನೆರವೇರಿತು. ಅರ್ಚಕರಾದ ಉಮೇಶ್ ಭಟ್ ಹಾಗೂ ಹರಿಭಟ್ ಅವರಿಂದ ದೇವತಾ ಪೂಜಾ ವಿಧಿಗಳು ನೆರವೇರಿದವು. ಬಳಿಕ ನೆರೆದ ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.