ಮಡಿಕೇರಿ, ಫೆ. ೨೧: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ತಾ. ೨೨ ರಂದು (ಇಂದು) ನಡೆಯಲಿದೆ. ಗೋಣಿಕೊಪ್ಪದಲ್ಲಿ ಬೈಕ್ ರ‍್ಯಾಲಿ ಮೂಲಕ ವೀರಾಜಪೇಟೆಗೆ ಆಗಮಿಸಿದ ಬಳಿಕ ವೀರಾಜಪೇಟೆಯ ಸಿರಿನಿಟಿ ಹಾಲ್‌ನಲ್ಲಿ ಸಮಾವೇಶ ನಡೆಯಲಿದೆ.

ಎಐಸಿಸಿ ಉಸ್ತುವಾರಿ ರೋಜಿ ಜಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಉಪಾಧ್ಯಕ್ಷ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ತೀತಿರ ಧರ್ಮಜ ತಿಳಿಸಿದ್ದಾರೆ.