ಪೊನ್ನಂಪೇಟೆ, ಫೆ.೨೨: ರಾಷ್ಟಿçÃಯ ಹಾಕಿ ತಂಡಗಳಲ್ಲಿ ಕೊಡಗಿನ ಆಟಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಕರ್ನಾಟಕದ ಹಾಕಿ ಕ್ರೀಡೆಯ ತವರಾದ ಕೊಡಗಿನಿಂದ ಅಂತರರಾಷ್ಟಿçÃಯ ಮಟ್ಟದ ಆಟಗಾರರು ಮತ್ತಷ್ಟು ಉತ್ಪಾದನೆಯಾಗಬೇಕು ಎಂದು ಅಭಿಪ್ರಾಯಪಟ್ಟ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ, ಇದಕ್ಕಾಗಿ ಪ್ರಾಥಮಿಕ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳನ್ನು ಹಾಕಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಅವರನ್ನು ಸಮರ್ಥವಾಗಿ ಉತ್ತೇಜಿಸಲು ಪರಿಣಾಮಕಾರಿಯಾದ
(ಮೊದಲ ಪುಟದಿಂದ) ರೂಪುರೇಷೆಯ ಅಗತ್ಯವಿದೆ ಎಂದು ಹೇಳಿದರು. ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೆöÊಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ವೀರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳನ್ನು ಚಿಕ್ಕಂದಿನಿAದಲೇ ಹಾಕಿಯತ್ತ ಸೆಳೆಯುವ ಹಾಕಿ ತರಬೇತಿ ಶಿಬಿರಗಳು ನಿರಂತರವಾಗಿ ಆಯೋಜನೆಗೊಳ್ಳ ಬೇಕು. ಇದರ ಜೊತೆಗೆ ದೈಹಿಕ ಬೆಳವಣಿಗೆಯ ತರಬೇತಿ ನೀಡಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಕನಿಷ್ಠ ಮುಂದಿನ ೨೫ ವರ್ಷಗಳ ದೂರದೃಷ್ಟಿತ್ವ ಹೊಂದಿರಬೇಕು ಎಂದು ರಾಣಿ ಮಾಚಯ್ಯ ಸಲಹೆ ನೀಡಿದರು.
ದೇಶದ ಹಾಕಿ ಕ್ರೀಡೆಗೆ ಕೊಡಗಿನ ಕೊಡುಗೆ ಅಪಾರವಾದದ್ದು. ಕೊಡಗನ್ನು ಹೊರತುಪಡಿಸಿ ಹಾಕಿಯ ಇತಿಹಾಸ ಬರೆಯಲು ಸಾಧ್ಯವಿಲ್ಲ. ಕೊಡಗಿನಲ್ಲಿ ಹಾಕಿ ಕ್ರೀಡೆ ಆಳವಾಗಿ ಬೇರೂರುವಲ್ಲಿ ಹಿಂದಿನಿAದಲೂ ಗ್ರಾಮೀಣ ಕ್ರೀಡಾಕೂಟಗಳು ಪ್ರಮುಖ ಪಾತ್ರ ವಹಿಸಿದೆ. ಒಂದು ಕಾಲದಲ್ಲಿ ಮರದ ಕೊಂಬೆಗಳಿAದ ಹಾಕಿ ಸ್ಟಿಕ್ ತಯಾರಿಸಿ ಬರಿಗಾಲಿನಲ್ಲಿ ಹಾಕಿ ಆಡುತ್ತಾ ಜಿಲ್ಲೆಯಲ್ಲಿ ಹಾಕಿಯನ್ನು ಕಟ್ಟಿ ಬೆಳೆಸಿದ ಹಿರಿಯ ತಲೆಮಾರಿನವರ ಶ್ರಮ ಮರೆಯುವಂತಿಲ್ಲ ಎಂದು ಸ್ಮರಿಸಿದರು. ಕೊಡಗು ಇದುವರೆಗೂ ಹಾಕಿ ಕ್ರೀಡೆಗೆ ನೀಡಿದ ಕೊಡುಗೆಯ ಪ್ರತೀಕವಾಗಿ ಜಿಲ್ಲೆಯ ಯಾವುದಾದರೂ ಪ್ರಮುಖ ಪಟ್ಟಣವೊಂದರಲ್ಲಿ ಹಾಕಿ ವೃತ್ತ ನಿರ್ಮಾಣವಾಗಬೇಕು ಎಂದು ರಾಣಿ ಮಾಚಯ್ಯ ಅಭಿಲಾಷೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿ. ಬಾಡಗ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಎಚ್. ಎ. ರಾಜಮ್ಮ, ನಿವೃತ್ತ ಮುಖ್ಯ ಶಿಕ್ಷಕರಾದ ಮಳವಂಡ ಸೀತಮ್ಮ ಪೂಣಚ್ಚ ಅವರು ಮಾತನಾಡಿದರು. ಹೈಪ್ಲೈಯರ್ಸ್ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಮತ್ತು ಕಾಫಿ ಬೆಳೆಗಾರರಾದ ನಂಬುಡುಮಾಡ ಕಿಸಾ ತಮ್ಮಯ್ಯ, ವೀರಾಜಪೇಟೆಯ ವಕೀಲರಾದ ಕೊಕ್ಕಂಡ ಅಪ್ಪಣ್ಣ, ಗ್ರಾಮದ ಹಿರಿಯ ಮುಖಂಡರಾದ ಕಂಜಿತAಡ ಗಿಣಿ ಮೊಣ್ಣಪ್ಪ, ಹಾಕಿ ಕೂರ್ಗ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಬಲ್ಯಾಟಂಡ ಪಾರ್ಥ ಚಿಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.
ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಐಮುಡಿಯಂಡ ರಾಣಿ ಮಾಚಯ್ಯ ಮತ್ತು ನಿವೃತ್ತ ಮುಖ್ಯ ಶಿಕ್ಷಕರಾದ ಮಳವಂಡ ಸೀತಮ್ಮ ಪೂಣಚ್ಚ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಳೇಟಿರ ಅಜಿತ್ ಪೂವಣ್ಣ ಪ್ರಾರ್ಥಿಸಿದರು. ವಿ. ಬಾಡಗ ಹೈಪ್ಲೆöÊಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜಿ ಪೂಣಚ್ಚ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ವೀಕ್ಷಕ ವಿವರಣೆಗಾರÀ ಮಾಳೇಟಿರ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಕಂಜಿತAಡ ಶ್ರುತಿ ವಂದಿಸಿದರು. ಆರಂಭದಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತರುವ ಸಂದರ್ಭದಲ್ಲಿ ಎರವ ಸಮುದಾಯದ ಸಾಂಪ್ರದಾಯಿಕ ಚೀನಿದುಡಿ ವಾದ್ಯ ತಂಡ ಸಾಥ್ ನೀಡಿದ್ದು ವಿಶೇಷವಾಗಿತ್ತು.
ಸಮಾರಂಭದ ಬಳಿಕ ವಿ.ಬಾಡಗ ಹೈಪ್ಲೈಯರ್ಸ್ ಮತ್ತು ಕೊಂಗAಡ ಕುಟುಂಬ ತಂಡಗಳ ನಡುವೆ ಪ್ರದರ್ಶನ ಪಂದ್ಯ ಜರುಗಿತು. ದಿನದ ಪ್ರಥಮ ಪಂದ್ಯಾವಳಿಯಲ್ಲಿ ತೀತಮಾಡ ತಂಡ ಗೈರು ಹಾಜರಾದ ಕಾರಣ ಕೊಂಗAಡ ತಂಡ ವಾಕ್ ಓವರ್ ಮೂಲಕ ಮುಂದಿನ ಹಂತ ಪ್ರವೇಶಿಸಿತು. ೨ನೇ ಪಂದ್ಯದಲ್ಲಿಯೂ ಅಮ್ಮಣಿಚಂಡ ತಂಡ ಗೈರುಹಾಜರಾದ ಕಾರಣ ಕಡೆಮಾಡ ತಂಡ ವಾಕ್ ಓವರ್ ಮೂಲಕ ಮುನ್ನಡೆ ಸಾಧಿಸಿತು. ೩ನೇ ಪಂದ್ಯದಲ್ಲಿ ಚೇಂದಿರ ತಂಡವು ಅಪ್ಪಂಡೇರAಡ ತಂಡವನ್ನು ೬-೦ ಗೋಲುಗಳ ಅಂತರದಿAದ ಮಣಿಸಿತು. ವಿಜೇತ ತಂಡದ ಅತಿಥಿ ಆಟಗಾರ, ರೈಲ್ವೇಸ್ನ ಪೂಣಚ್ಚ ೧೭ನೇ, ೨೪ನೇ ಮತ್ತು ೩೭ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ತಂಡದ ಡ್ಯಾನಿ ೧೦ನೇ ಮತ್ತು ೩೧ನೇ ನಿಮಿಷದಲ್ಲಿ ಹಾಗೂ ಪೊನ್ನಣ್ಣ ೧೫ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ದಿನದ ಕೊನೆಯ ಪಂದ್ಯದಲ್ಲಿ ಕಾಳೆಂಗಡ ತಂಡವು ಗೈರು ಹಾಜರಾದ ಕಾರಣ ನಂಬುಡುಮಾಡ ತಂಡ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಪಂದ್ಯಾವಳಿ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ ಅವರ ನೇತೃತ್ವದಲ್ಲಿ ತೀರ್ಪುಗಾರರಾದ ಚಂದಪ್ಪAಡ ಆಕಾಶ್, ಕೋಡಿಮಣಿಯಂಡ ಗಣಪತಿ, ಚೈಯಂಡ ಅಪ್ಪಚ್ಚು,ಕರವಂಡ ಅಪ್ಪಣ್ಣ, ಚೋಯಮಾಡಂಡ ಚಂಗಪ್ಪ, ನೆಲ್ಲಮಕ್ಕಡ ಪವನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ ಮೊದಲಾದವರು ತಾಂತ್ರಿಕ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದರು.
-ಚಿತ್ರ ವರದಿ: ರಫೀಕ್ ತೂಚಮಕೇರಿ