ಮಡಿಕೇರಿ, ಫೆ. ೨೨: ‘ಭವಿಷ್ಯ ನಿಧಿ ನಿಮ್ಮ ಹತ್ತಿರ' ೨.೦ ಅಡಿಯಲ್ಲಿ ಜಿಲ್ಲಾ ವ್ಯಾಪ್ತಿಯ ಮಾಹಿತಿ ಕಾರ್ಯಕ್ರಮವನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಮೈಸೂರು ಪ್ರಾದೇಶಿಕ ಕೇಂದ್ರದಿAದ ಹಮ್ಮಿಕೊಳ್ಳಲಾಗಿದೆ. ತಾ. ೨೭ ರಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬೆಳಿಗ್ಗೆ ೯ ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪಿ.ಎಫ್. ಸದಸ್ಯರು, ಪಿಂಚಣಿದಾರರು, ಉದ್ಯೋಗದಾತರು ಹಾಜರಾಗಿ ಮಾಹಿತಿ ಪಡೆದುಕೊಳ್ಳುವಂತೆ ಮೈಸೂರು ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ೦೮೨೧-೨೫೯೯೨೦೦/೨೨೨ ಅನ್ನು ಸಂಪರ್ಕಿಸುವAತೆ ಕೋರಿದೆ.